ಲಂಡನ್ (ಎಎಫ್ಪಿ):  ಹಿಂದೆ ವಿಶ್ವ ದಾಖಲೆ ಸಾಧನೆ ಮಾಡಿದ್ದ ಜಮೈಕಾದ ಅಸಾಫಾ ಪೊವೆಲ್ ಲಂಡನ್ ಒಲಿಂಪಿಕ್ಸ್ನ 4X100 ಮೀಟರ್ ರಿಲೇಯಲ್ಲಿ ಕೂಡ ಓಡುವುದಿಲ್ಲ. ಪುರುಷರ 100 ಮೀಟರ್ನಲ್ಲಿ ಓಡುವಾಗ ಅವರು ಸ್ನಾಯು ಸೆಳೆತದಿಂದ ಬಳಲಿದ್ದರು.

ಈ ಕಾರಣ ಅವರು ಈ ಋತುವಿನಲ್ಲಿ ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. 29 ವರ್ಷ ವಯಸ್ಸಿನ ಪೊವೆಲ್ 100 ಮೀ. ಓಟದಲ್ಲಿ ಕೊನೆಯವರಾಗಿ ಗುರಿ ತಲುಪಿದ್ದರು.

`ನನ್ನ ಅನುಪಸ್ಥಿತಿಯಲ್ಲೂ ಜಮೈಕಾ 4X100 ಮೀಟರ್ ರಿಲೇಯಲ್ಲಿ ಉತ್ತಮ ಪ್ರದರ್ಶನ ತೋರಲಿದೆ. ಆ ವಿಶ್ವಾಸ ನನ್ನಲ್ಲಿದೆ. ಎಲ್ಲರೂ ಸೇರಿ ಪ್ರೋತ್ಸಾಹ ತುಂಬೋಣ~ ಎಂದು ಪೊವೆಲ್ ಟ್ವಿಟರ್ ಮೂಲಕ ತಿಳಿಸಿದ್ದಾರೆ.
4X100 ಮೀಟರ್ ರಿಲೇಯಲ್ಲಿ ಜಮೈಕಾ ತಂಡ 2008ರ ಒಲಿಂಪಿಕ್ಸ್ನಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದಿತ್ತು. 100 ಮೀ. ಚಾಂಪಿಯನ್ ಉಸೇನ್ ಬೋಲ್ಟ್ ಕೂಡ ಈ ವಿಭಾಗದಲ್ಲಿ ಓಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.