ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಸ್‌: ‘ಟೊರೊರೊಸ್ಸೊ’,‘ಹಾಲ್‌ ಆಫ್‌ ಫೇಮರ್‌’ ಪೈಪೋಟಿ

Last Updated 4 ಮಾರ್ಚ್ 2017, 19:42 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ‘ದಿ ಇಂಡಿ ಯನ್‌ ಟರ್ಫ್‌ ಇನ್ವಿಟೇಶನ್‌ ಕಪ್‌’ ರೇಸ್‌ ಪ್ರಿಯರಲ್ಲಿ  ಮಹತ್ವ ಪಡೆದಿದೆ. ಎಂಟು ಗಂಡು ಮತ್ತು ನಾಲ್ಕು ಹೆಣ್ಣು  ಕುದುರೆ ಗಳು ಭಾಗವಹಿಸುತ್ತಿದ್ದರೂ, ‘ಟೊರೊ ರೊಸ್ಸೊ’ ಮತ್ತು ‘ಹಾಲ್‌ ಆಫ್‌ ಫೇಮರ್‌‘  ಎರಡು ಕುದುರೆಗಳ ನಡುವೆ ಜಿದ್ದಾಜಿದ್ದಿ ಹೋರಾಟ ಕಂಡು ಬರು ತ್ತಿದ್ದು, ಈ ಎರಡೂ ಕುದುರೆಗಳು ಸ್ಥಳೀಯ ಸ್ಪರ್ಧಿಗಳಾಗಿರುವುದು ಬೆಂಗ ಳೂರು ರೇಸ್‌ಪ್ರಿಯರಲ್ಲಿ ಮತ್ತಷ್ಟು ಹರುಷ ತಂದಿದ್ದು, ಫಲಿತಾಂಶಕ್ಕಾಗಿ ಕಾತರದಿಂದ ಕಾಯುವಂತೆ ಮಾಡಿದೆ.

ಪದ್ಮನಾಭನ್‌ ತರಬೇತಿ ನೀಡಿರುವ ‘ಹಾಲ್‌ ಆಫ್‌ ಫೇಮರ್‌’ ತನ್ನ ಪ್ರಾರಂ ಭಿಕ ಓಟಗಳಲ್ಲಿ ಕ್ಲಾಸಿಕ್‌ ರೇಸ್‌ಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದೆಯೆಂದು ಯಾರೂ ಊಹಿಸಿರಲಿಕ್ಕಿಲ್ಲ.  ಆದರೆ, ಈ ಹೆಣ್ಣು ಕುದುರೆಯು ಹಂತ ಹಂತವಾಗಿ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ತನ್ನ ಕೊನೆಯ ಎರಡು ಓಟಗಳಲ್ಲಿ ಕೋಲ್ಕತ್ತ ಡರ್ಬಿ ಮತ್ತು ಮುಂಬೈನಲ್ಲಿ ನಡೆದ ಶ್ರೀಮಂತ ಇಂಡಿಯನ್‌ ಡರ್ಬಿಯನ್ನು ಗೆದ್ದು ಕೊಂಡಿದೆ. ಅಲ್ಲದೇ ಈ ಶ್ರೀಮಂತ ಇನ್ವಿಟೇಶನ್‌ ಕಪ್‌ ಗೆಲ್ಲುವ ಫೇವರಿಟ್‌ ಎನಿಸಿದೆ.

ಆದರೆ, ಟೊರೊರೊಸ್ಸೊ ಕುದುರೆಯು ತದ್ವಿರುದ್ದವಾಗಿ ಕ್ಲಾಸಿಕ್‌ ಸ್ಪರ್ಧಿ ಎನಿಸಿಕೊಂಡಿದೆ. ತನ್ನ ಜೀವಿತದ ನಾಲ್ಕನೇ ಓಟದಲ್ಲಿ ಬೆಂಗಳೂರು ಡರ್ಬಿಯಂತಹ ಕ್ಲಾಸಿಕ್‌ ರೇಸ್‌ ಅನ್ನು ತನ್ನ ಮೊದಲನೇ ಗೆಲುವನ್ನಾಗಿ ಪಡೆದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಆದರೆ, ‘ಹಾಲ್‌ ಆಫ್‌ ಫೇಮರ್‌’ ಅಂತಹ ನುರಿತ ಕುದುರೆಯನ್ನು ಮಣಿಸುವುದು ಸುಲಭವಲ್ಲದಿದ್ದರೂ, ಇರ್ಫಾನ್‌ ಘಟಾಲ ತರಬೇತಿ ನೀಡಿರುವ ಈ ಗಂಡು ಕುದುರೆಯು ಗೆದ್ದ ರೀತಿಯನ್ನು ಗಮನಿಸಿದರೆ ಈ ಪ್ರತಿಷ್ಠಿತ ರೇಸ್‌ ಅನ್ನು ಗೆದ್ದು 2017ನೇ ಸಾಲಿನ ಚಾಂಪಿಯನ್‌ ಪಟ್ಟ ಪಡೆಯಬಹುದು ಎನಿಸಿದೆ.

ಮಧ್ಯಾಹ್ನ 1.30ಕ್ಕೆ ಪ್ರಾರಂಭವಾಗಲಿರುವ ದಿನದ ಒಟ್ಟು ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1.ಕರ್ನಾಟಕ ರೇಸ್‌ಹಾರ್ಸ್‌ ಓನರ್ಸ್‌ ಅಸೋಸಿಯೇಶನ್‌   ಮಿಲಿಯನ್ ಕಪ್‌: 1100 ಮೀ.
ಕ್ವೀನ್‌ ಲತಿಫಾ 12, ಬೋರ ಬೋರ 5, ಕ್ಯಾಂಟಾಬ್ರಿಯಾ 6
2. ಇಂಡಿಯಾರೇಸ್‌.ಕಾಮ್‌ ಮಿಲಿಯನ್‌; 1800 ಮೀ.
ಕ್ಲೋ 1, ಸ್ಯಾಟಿನೆಟ್‌ 12, ಜ್ಯಾಕ್‌ ಆಫ್‌ ಹಾರ್ಟ್ಸ್‌ 7
3. ಹಿಂದೂ ಮಲ್ಟಿ–ಮಿಲಿಯನ್‌; 1200 ಮೀ.

ಸಿಲ್ವರ್‌ ಐಕಾನ್‌ 1, ಮಲಾವಿ 4, ಲಾರ್ಡ್‌ ಬಕಿಂಗ್‌ಹ್ಯಾಮ್‌ 2
4. ಶಪೂರ್ಜಿ ಪಲ್ಲೋನ್ಜಿ ಮಿಲಿಯನ್‌; 2000 ಮೀ.
ರೇರ್‌ ರಿದ್ಮ್‌ 10, ವಾಚ್‌ಮೈಸ್ಕ್ರಿಪ್ಟ್‌ 7, ಫ್ಯಾಬ್ಯುಲಸ್‌ 13
5. ಸುರೇಸ್‌ ಮಹೀಂದ್ರ ಮಲ್ಟಿ–ಮಿಲಿಯನ್‌ ಟ್ರೋಫಿ; 1400 ಮೀ.
ಅಕ್ಕೊಲೇಡ್‌ 1, ಬೋಲ್ಡ್‌ ಕಮಾಂಡ್‌ 2, ಯುವರ್‌ ರಾಯಲ್‌ ಮೆಜೆಸ್ಟಿ 3
6. ಮೇಜರ್‌ ಪಿ.ಕೆ.ಮೆಹ್ರಾ ಮೆಮೋರಿಯಲ್‌ ಸೂಪರ್‌ ಮೈಲ್‌ ಕಪ್‌;
1600 ಮೀ. ಸಾರ್ಜೆಂಟ್‌ ಅಟ್‌ ಆರ್ಮ್ಸ್‌ 10, ಬೆಟಾಲಿಯನ್‌ 9, ಕಾಮನ್‌ ವೆಲ್ತ್‌ 11

7. ಇಂಡಿಯನ್‌ ಟರ್ಫ್‌ ಇನ್ವಿಟೇಶನ್‌ ಕಪ್‌; 2400 ಮೀ.
ಟೊರೊರೊಸ್ಸೊ 8, ಹಾಲ್‌ ಆಫ್‌ ಫೇಮರ್‌ 9, ಟೆಮೆರಿಟಿ 11
8. ಕಿಮ್ಮಾನೆ ಮಿಲಿಯನ್‌; 1400 ಮೀ.
ಪರ್ಲ್‌ ಸಿಟಿ 1, ಅರೇಕಾ ಕ್ರೂಝ್‌ 2, ಜಸ್ಟೀಸ್‌ ಏಂಜೆಲ್‌ 6

ಉತ್ತಮ ಬೆಟ್‌: ಅಕ್ಕೊಲೆಏಡ್‌
ಜಾಕ್‌ಪಾಟ್‌ಗೆ 4,5,6,7,8; ಮೊದಲನೇ ಟ್ರಿಬಲ್‌ಗೆ 3,4,5; ಎರಡನೇ ಟ್ರಿಬಲ್‌ಗೆ 6,7,8.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT