ಚಿಕ್ಕಮಗಳೂರು: ಕಾಫಿ ಕಣಿವೆಯ ಕಡಿದಾದ ಮಾರ್ಗದಲ್ಲಿ ಫೋಗ್ಸ್ ವ್ಯಾಗನ್ ಪೋಲೊ ಕಾರು ಚಾಣಾಕ್ಷತನದಿಂದ ಚಾಲನೆ ಮಾಡಿದ ಮಂಗಳೂರಿನ ಚಾಲಕ ಅರ್ಜುನ್ ರಾವ್ (ಸಹ ಚಾಲಕ ಬೆಂಗಳೂರಿನ ಸತೀಶ್ ರಾಜಗೋಪಾಲ್) ಶನಿವಾರ ಮುಕ್ತಾಯವಾದ ಚಿಕ್ಕಮಗಳೂರು ಮೋಟಾರ್ಸ್ ಸ್ಪೋಟ್ಸ್ ಕ್ಲಬ್ ಮತ್ತು ಕೆಫೆ ಕಾಫಿ ಡೇ ಆಶ್ರಯದ ಐನ್‌ಆರ್‌ಸಿ 5ನೇ ಹಾಗೂ ಕೊನೆ ಸುತ್ತಿನ ರ್‍ಯಾಲಿಯ ಸಮಗ್ರ ಮತ್ತು ಐಎನ್‌ಆರ್‌ಸಿ 1600 ವಿಭಾಗದಲ್ಲಿ ಅಗ್ರಸ್ಥಾನ ಪಡೆದರು.

ಚೀಕನಹಳ್ಳಿ ಸಮೀಪದ ಚಟ್ನಹಳ್ಳಿ, ಚಂದ್ರಾಪುರ, ಕಮ್ಮರಗೋಡು ಕಾಫಿ ತೋಟಗಳ ಕಿರಿದಾದ ರಸ್ತೆಯಲ್ಲಿ ಅಂತಿಮ ದಿನ ಮೂರು ಹಂತದ ಸ್ಪರ್ಧೆ ನಿಗದಿಪಡಿಸಲಾಗಿತ್ತು. ಶುಕ್ರವಾರ ನಡೆದಿದ್ದ ಪ್ರಮುಖ ಹಂತದ ಸ್ಪರ್ಧೆ ಯಲ್ಲಿ ನಿಖರ ವೇಗ ಕಾಯ್ದುಕೊಂಡು ಮುನ್ನಡೆ ಸಾಧಿಸಿದ್ದ ಮಾಜಿ ವಿಶ್ವ ಚಾಂಪಿಯನ್ ಮಲೇಷ್ಯಾದ ಕರಮ್ ಜಿತ್ ಸಿಂಗ್ (ಸಹ ಚಾಲಕ ಜಗದೇವ್ ಸಿಂಗ್) ಚಾಲನೆ ಮಾಡುತ್ತಿದ್ದ ಫೋಗ್ಸ್ ವ್ಯಾಗನ್ ಪೋಲೊ ಆರ್2 ಕಾರು, 3ನೇ ಹಂತದ ಸ್ಪರ್ಧೆಯಲ್ಲಿ ತಾಂತ್ರಿಕ ಸಮಸ್ಯೆ ತಲೆದೋರಿ ನಡು ರಸ್ತೆಯಲ್ಲೇ ಕೆಟ್ಟು ನಿಂತಿತು. ರಸ್ತೆ ಅತ್ಯಂತ ಕಿರಿದಾ ಗಿದ್ದರಿಂದ ಕಾರು ಹೊರ ತೆಗೆಯು ವುದು ಅಸಾಧ್ಯವಾಯಿತು. ಹಿಂಬಾಲಿಸಿ ಬರುತ್ತಿದ್ದ ಕಾರುಗಳಿಗೆ ಮುಂದೆ ಸಾಗಲು ಅವಕಾಶ ಸಿಗದೆ ರಸ್ತೆ ಸಂಪೂರ್ಣ ಜಾಮ್ ಆಯಿತು. ಇದರಿಂದ ಸಂಘಟಕರಿಗೆ ಮೂರನೇ ಹಂತದ ಸ್ಪರ್ಧೆ ಕೈಬಿಡುವುದು ಅನಿವಾರ್ಯ ವಾಯಿತು. ಅಂತಿಮವಾಗಿ ಎರಡನೇ ಹಂತದವರೆಗೆ ನಡೆದಿದ್ದ ಫಲಿತಾಂಶ ಆಧರಿಸಿ ವಿಜೇತರನ್ನು ಘೋಷಿಸಲಾಯಿತು.

ಅರ್ಜುನ್ ರಾವ್–ಸತೀಶ್ ರಾಜಗೋಪಾಲ ಜೋಡಿ 1 ಗಂಟೆ, 55 ನಿಮಿಷ, 06.7 ಸೆಕೆಂಡುಗಳಲ್ಲಿ ನಿಗದಿತ ಗುರಿ ಮುಟ್ಟಿತು. ಕೊನೆಯ ಸುತ್ತಿನ ರ್‍ಯಾಲಿಯಲ್ಲಿ ಅಗ್ರಸ್ಥಾನ ಪಡೆ ಯುವ ಜತೆಗೆ ಇಂಡಿಯನ್ ನ್ಯಾಷನಲ್ ಚಾಂಪಿಯನ್‌ಷಿಪ್‌ನಲ್ಲಿ ದ್ವಿತೀಯ ಸ್ಥಾನ ಸಂಪಾದಿಸಿತು. ಕೋಲ್ಕತ್ತಾದ ಚಾಲಕ ಅಮಿತ್ ರಜಿತ್ ಘೋಷ್ ನಾಲ್ಕು ಸುತ್ತುಗಳ ರ್‍ಯಾಲಿಯಲ್ಲಿ ಅಗ್ರಸ್ಥಾನ ಪಡೆದರು.

ಮಿಸ್ತುಬಿಷಿ ಸಿಡಿಯಾ ಚಾಲನೆ ಮಾಡಿದ ಬೆಂಗಳೂರಿನ ವಿಕ್ರಮ್ ದೇವ ದಾಸನ್ (ಸಹ ಚಾಲಕ ಮಂಗಳೂರಿನ ಅಶ್ವಿನ್ ನಾಯಕ್) ಯಶಸ್ವಿಯಾಗಿ ಗುರಿ ಸೇರಿ ಎರಡನೇ ಸ್ಥಾನ (01:59.56.5) ಪಡೆದರು. ಫೋಗ್ಸ್ ವ್ಯಾಗನ್ ಕಾರು ಚಾಲನೆ ಮಾಡಿದ ಸ್ಲೈಡ್‌ವೇಸ್ ಇಂಡಸ್ಟ್ರೀಸ್ ತಂಡದ ಸಿರಿಶ್ ಚಂದ್ರ (ಸಹ ಚಾಲಕ ನಿಖಿಲ್ ಪೈ) ಇವರಿಗೆ ತೀವ್ರ ಪೈಪೋಟಿ ನೀಡಿ ಮೂರನೇ (02:00: 40.7) ಸ್ಥಾನಕ್ಕೆ ತೃಪ್ತಿಪಟ್ಟರು.

ಫಲಿತಾಂಶ: ಐಎನ್‌ಆರ್‌ಸಿ ಓವರ್ ಆಲ್: ಅರ್ಜುನ್ ರಾವ್/ಸತೀಶ್ ರಾಜಗೋಪಾಲ್ (ಫೋಗ್ಸ್ ವ್ಯಾಗನ್ ಪೋಲೊ)–1 (1 ಗಂ. 55 ನಿ, 06.7ಸೆ.), ವಿಕ್ರಮ್ ದೇವದಾಸನ್/ ಅಶ್ವಿನ್ ನಾಯಕ್ (ಮಿಸ್ತುಬಿಷಿ ಸಿಡಿಯಾ)–2 (01:59: 56.5), ಸಿರಿಶ್ ಚಂದ್ರನ್/ನಿಖಿಲ್ ಪೈ (ಸ್ಲೈಡ್‌ವೇಸ್ ಇಂಡಸ್ಟ್ರೀಸ್, ಫೋಗ್ಸ್ ವ್ಯಾಗನ್ ಪೋಲೊ)–3 (2:00:40.7).

ಐಎನ್‌ಆರ್‌ಸಿ 2000 ಸಿಸಿ: ವಿಕ್ರಮ್ ದೇವದಾಸನ್/ ಅಶ್ವಿನ್ ನಾಯಕ್ (ಮಿಸ್ತುಬಿಷಿ ಸಿಡಿಯಾ)–1 (01:59: 56.5), ಪೃಥ್ವಿ ಡಾಮಿನಿಕ್/ ಎಂ.ಎಸ್. ರವೀಂದ್ರ (ಮಿಸ್ತುಬಿಷಿ ಸಿಡಿಯಾ)–2 (02:01:04.5), ಡಾ.ಬಿಕ್ಕುಬಾಬು/ ಜಾರ್ಜ್ ವರ್ಗೀಸ್ (ಮಿಸ್ತುಬಿಷಿ ಸಿಡಿಯಾ)–3 (02:05:10.7).

ಐಎನ್‌ಆರ್‌ಸಿ 1600 ಸಿಸಿ: ಅರ್ಜುನ್ ರಾವ್/ಸತೀಶ್ ರಾಜಗೋಪಾಲ್ (ಫೋಗ್ಸ್ ವ್ಯಾಗನ್ ಪೋಲೊ)–1 (01:55:06.7), ಸಿರಿಶ್ ಚಂದ್ರನ್/ ನಿಖಿಲ್ ಪೈ (ಸ್ಲೈಡ್‌ವೇಸ್ ಇಂಡಸ್ಟ್ರಿಸ್, ಫೋಗ್ಸ್ ವ್ಯಾಗನ್ ಪೋಲೊ)–2 (02:00:40.7) , ಹೃಷಿಕೇಶ್ ಥ್ಯಾಕರಸೆ/ ನಿನಾದ್ ಮಿರಜ್‌ಗಾವಂಕರ್ (ಫೋಗ್ಸ್ ವ್ಯಾಗನ್ ಪೋಲೊ)–3 (02:05:40.0).

ಜೆಐಎನ್‌ಆರ್‌ಸಿ: ರೋಹನ್ ಪವಾರ್/ಅರ್ಜುನ್ ಮೆಹತಾ (ಸ್ಲೈಡ್‌ವೇಸ್ ಇಂಡಸ್ಟ್ರಿಸ್, ಫೋಗ್ಸ್ ವ್ಯಾಗನ್ ಪೋಲೊ)–1(02:05:21.2), ಸಿ.ಧ್ರುವ /ಬಿ.ಸಿ.ರೂಪೇಶ್ (ಮಾರುತಿ ಎಸ್ಟೀಮ್)–2 (02:06:36.6), ಆಷಿಕಾ ಮೆನೆಜಸ್/ ಲೋಕೇಶ್‌ಗೌಡ (ಮಾರುತಿ ಎಸ್ಟೀಮ್)–3 (02:16:08.4).

ಎಸ್‌ಯುವಿ ಎನ್‌ಆರ್‌ಸಿ: ಸನ್ನಿ ಸಿದ್ಧು/ ಪಿ.ವಿ.ಎಸ್.ಮಾರುತಿ (ಮಹಿಂದ್ರ ಅಡ್ವೆಂಚರ್ ರ್‍ಯಾಲಿ, ಎಕ್ಸ್‌ಯುವಿ 500)–1(01:56:13.7), ಲೋಹಿತ್ ಅರಸ್/ ಬೋನಿ ಥಾಮಸ್ (ಮಹಿಂದ್ರ ಅಡ್ವೆಂಚರ್ ರ್‍ಯಾಲಿ, ಎಕ್ಸ್‌ಯುವಿ 500)–2(02:01:08.9.

ಐಆರ್‌ಸಿ: ಸುಮಿತ್ ಪಂಜಾಬಿ/ ವೇಣು ರಮೇಶ್‌ಕುಮಾರ್ (ಮಿಸ್ತುಬಿಷಿ ಸಿಡಿಯಾ)–1(02:08:13.7), ಶ್ಯಾಮ್ ಚೆಲ್ಲಪ್ಪನ್/ ಸೋಬ್ ಜಾರ್ಜ್ (ಮಾರುತಿ ಬೆಲೆನೊ)–2(02:23:39.2),

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.