ಬೆಂಗಳೂರು: ಕೀನ್ಯಾದ ದೂರ ಅಂತರದ ಓಟಗಾರ ಅಲೆಕ್ಸ್ ಕೊರಿಯೊ ಅವರು ಮೇ 27ರಂದು ಬೆಂಗಳೂರಿನಲ್ಲಿ ನಡೆಯುವ ಟಿಸಿಎಸ್ ವಿಶ್ವ 10ಕೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಅಲೆಕ್ಸ್ ಅವರು 2013 ಮತ್ತು 2017ರಲ್ಲಿ ಪ್ರಶಸ್ತಿ ಜಯಿಸಿದ್ದರು. ಅವರಿಗೆ ಈ ಬಾರಿ ಕೀನ್ಯಾದವರೇ ಆದ ಜಿಯೊಫ್ರೆ ಕ್ಯಾಮವೊರೊರ್ ಮತ್ತು ಇಥಿಯೋಪಿಯಾದ ಮೋಸಿನೆಟ್ ಜೆರೆಮೆವ್ ಅವರಿಂದ ಕಠಿಣ ಸ್ಪರ್ಧೆ ಎದುರಾಗುವ ಸಾಧ್ಯತೆ ಇದೆ.

ಜಿಯೊಫ್ರೆ ಅವರು ಈ ವರ್ಷದ ಆರಂಭದಲ್ಲಿ ವಲೆನ್ಸಿಯಾದಲ್ಲಿ ನಡೆದಿದ್ದ ಐಎಎಎಫ್ ವಿಶ್ವ ಹಾಫ್ ಮ್ಯಾರಥಾನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ಇವರು 2012 ಮತ್ತು 2014ರ ವಿಶ್ವ 10 ಕೆ ಓಟದ ಸ್ಪರ್ಧೆಗಳಲ್ಲಿ ಚಾಂಪಿಯನ್ ಆಗಿದ್ದರು. ಮೋಸಿನೆಟ್ ಕೂಡ 2015 ಮತ್ತು 2016ರಲ್ಲಿ ಪ್ರಶಸ್ತಿ ಜಯಿಸಿದ್ದರು.

ಇಥಿಯೋಪಿಯಾದ ಬಿರ್ಹಾನು ಲೆಗೆಸ್, ಲೆವುಲ್ ಗೆಬ್ರೆಸಿಲಸ್ಸೀ, ಕೀನ್ಯಾದ ಎಡ್ವಿನ್ ಕಿಪ್ಟೂ, ಆಸ್ಟ್ರೇಲಿಯಾದ ಬ್ರೆಟ್ ರಾಬಿನ್‌ಸನ್, ಅಮೆರಿಕದ ರ‍್ಯಾನ್ ವೇಲ್, ಉಗಾಂಡದ ಮೋಸೆಸ್ ಕುರೊಂಗ್ ಅವರೂ ಕಣಕ್ಕಿಳಿಯಲಿದ್ದಾರೆ.

ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಸುಮಾರು 27,000 ಮಂದಿ ಓಟಗಾರರು ಭಾಗವಹಿಸುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.