ಬೆಂಗಳೂರು: ಪೋಸ್ಟಲ್ ಹಾಗೂ ಡಿವೈಎಸ್ಎಸ್ `ಎ~ ತಂಡದವರು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದ ರಾಜ್ಯ `ಎ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್ಷಿಪ್ ಪಂದ್ಯದಲ್ಲಿ ಜಯಗಳಿಸಿ ಪೂರ್ಣ ಪಾಯಿಂಟ್ಸ್ ಸಂಗ್ರಹಿಸಿದರು.
ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪೋಸ್ಟಲ್ ತಂಡ 2-0 ಗೋಲುಗಳಿಂದ ಐಟಿಐ ತಂಡವನ್ನು ಸೋಲಿಸಿತು. ಇದಕ್ಕೆ ಮೊದಲು ನಡೆದ ಇದೇ ಲೀಗ್ ಇನ್ನೊಂದು ಪಂದ್ಯದಲ್ಲಿ ಡಿವೈಎಸ್ಎಸ್ `ಎ~ ತಂಡ 7-2 ಗೋಲುಗಳಿಂದ ಫ್ಲೈಯಿಂಗ್ ಹಾಕಿ ಕ್ಲಬ್ ವಿರುದ್ಧ ಸುಲಭ ವಿಜಯ ಸಾಧಿಸಿತು.
ನಾಳೆ (ಸೋಮವಾರ) ಮಧ್ಯಾಹ್ನ 1-00ಕ್ಕೆ ಆರ್ಬಿಐ-ಸಿನರ್ಜಿ ಸ್ಪೋರ್ಟ್ಸ್ ಕ್ಲಬ್ ಆನಂತರ ಐಟಿಐ-ಬಿಇಎಲ್ ನಡುವೆ ಪಂದ್ಯ ನಡೆಯಲಿದೆ.