ಭುವನೇಶ್ವರ: ನಿರಂತರ ಗೋಲು ಗಳಿಸಿದ ಬೆಲ್ಜಿಯಂ ವಿಶ್ವ ಹಾಕಿ ಲೀಗ್ ಫೈನಲ್‌ನ ಭಾನುವಾರದ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಭರ್ಜರಿ ಜಯ ಗಳಿಸಿತು.

ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಲ್ಯೂಪರ್ಟ್ ಲಾಯಿಕ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ 5–0 ಅಂತರದ ಗೆಲುವು ದಾಖಲಿಸಿತು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.

ವ್ಯಾನ್ ಆಬೆಲ್ ಫ್ಲಾರೆಂಟ್ ಮೂರನೇ ನಿಮಿಷದಲ್ಲಿ ಗಳಿಸಿದ ಗೋಲಿನ ಮೂಲಕ ಬೆಲ್ಜಿಯಂ ಮುನ್ನಡೆ ಗಳಿಸಿತು. ಈ ಆಘಾತದಿಂದ ಆತಂಕಗೊಂಡ ಸ್ಪೇನ್ ಮರು ಹೋರಾಟ ನಡೆಸಿತು. 37ನೇ ನಿಮಿಷದ ವರೆಗೆ ಉಭಯ ತಂಡಗಳು ಜಿದ್ದಾಜಿದ್ದಿಯ ಹೋರಾಟ ನಡೆಸಿದವು.

ನಂತರ ಪಂದ್ಯದ ಮೇಲೆ ಬೆಲ್ಜಿಯಂ ನಿಯಂತ್ರಣ ಸಾಧಿಸಿತು. ನಾಲ್ಕು ಗೋಲುಗಳನ್ನು ಬಾರಿಸಿ ಎದುರಾಳಿ ತಂಡವನ್ನು ದಂಗಾಗಿಸಿತು. 38 ಮತ್ತು 57ನೇ ನಿಮಿಷದಲ್ಲಿ ಲಭಿಸಿದ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಲ್ಯೂಪರ್ಟ್ ಲಾಯಿಕ್ ಸದುಪಯೋಗ ಮಾಡಿಕೊಂಡರು. ಈ ಮೂಲಕ 3–0 ಅಂತರದ ಮುನ್ನಡೆ ಗಳಿಸಿಕೊಟ್ಟರು.

58ನೇ ನಿಮಿಷದಲ್ಲಿ ಚಾರ್ಲಿಯರ್ ಸೆಡ್ರಿಯಕ್ ಫೀಲ್ಡ್ ಗೋಲು ಗಳಿಸಿ ಎದುರಾಳಿಗಳಿಗೆ ತೀವ್ರ ನಿರಾಸೆ ಮೂಡಿಸಿದರು. ಮರು ನಿಮಿಷದಲ್ಲಿ ಲ್ಯೂಪರ್ಟ್ ಲಾಯಿಕ್ ವೈಯಕ್ತಿಕ ಮೂರನೇ ಗೋಲು ಗಳಿಸಿದರು. ನೆದರ್ಲೆಂಡ್ಸ್–ಅರ್ಜೆಂಟೀನಾ ಪಂದ್ಯ ಡ್ರಾ: ’ಎ’ ಗುಂಪಿನ ನೆದರ್ಲೆಂಡ್ಸ್ ಮತ್ತು ಅರ್ಜೆಂಟೀನಾ ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

ಉಭಯ ತಂಡಗಳು ತಲಾ ಮೂರು ಗೋಲು ದಾಖಲಿಸಿದವು.

12ನೇ ನಿಮಿಷದಲ್ಲಿ ಬ್ರಿಂಕ್‌ಮ್ಯಾನ್ ಗಳಿಸಿದ ಗೋಲಿನ ಮೂಲಕ ನೆದರ್ಲೆಂಡ್ಸ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.