ಮಂಗಳವಾರ, ಸೆಪ್ಟೆಂಬರ್ 22, 2020
24 °C

ಅಂಬೇಡ್ಕರ್‌ ಮನೆ ಮೇಲೆ ದಾಳಿ: ತಪ್ಪಿತಸ್ಥರ ಬಂಧನಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ ಬೆಂಗಳೂರು Updated:

ಅಕ್ಷರ ಗಾತ್ರ : | |

ಮಂಡ್ಯ: ‘ಮುಂಬೈನ ದಾದರ್‌ನಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ರಾಜಗೃಹದ ಮೇಲೆ ದಾಳಿ ನಡೆಸಿರುವವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ವಾರಿಯರ್ಸ್‌, ದ್ರಾವಿಡ ಚಳವಳಿ ಮುಖಂಡ ಅಭಿಗೌಡ ಹನಕೆರೆ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಮಾಜದಲ್ಲಿ ಜಾತೀಯತೆ, ತಾರತಮ್ಯ ಮೂಡಿಸುವ ಮನಸ್ಥಿತಿಗಳೇ ದಾಳಿಯ ಹಿಂದಿವೆ. ಟಿ.ವಿ ಮಾಧ್ಯಮ, ಪಠ್ಯಪುಸ್ತಕದ ಮೂಲಕ ಇಂದಿಗೂ ಅಸಮಾನತೆ ಹಾಗೂ ತಾರತಮ್ಯ ಬಿತ್ತುತ್ತಿರುವ ಫಲವೇ ಈ ದಾಳಿಯಾಗಿದೆ. ಅಂಬೇಡ್ಕರ್‌ ಅವರು ಯಾವುದೇ ಭಾಷೆ, ಜಾತಿಗೆ ಪ್ರಾಂತ್ಯಕ್ಕೆ ಸೀಮಿತವಲ್ಲ. ಅವರು ವಿಶ್ವಮಾನವರಾಗಿದ್ದು, ಬಡವರು, ದೀನ ದಲಿತರು, ಅಸಂಘಟಿತ ವಲಯದ ಕಾರ್ಮಿಕರ ಹಲವು ಸಮಸ್ಯೆಗಳಿಗೆ ಪರಿಹಾರವಾಗಿದ್ದಾರೆ’ ಎಂದು ಹೇಳಿದರು.

ಗಂಗರಾಜು ಹನಕೆರೆ ಮಾತನಾಡಿ ‘ಇಲ್ಲಿಯವರೆಗೂ ದಾಳಿಯ ವಿರುದ್ಧವಾಗಿ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದರೆ ಇದು ಪೂರ್ವನಿಯೋಜಿತ ವೆನಿಸುತ್ತದೆ. ಅಲ್ಲದೆ ಇದನ್ನು ಖಂಡಿಸಿ ಪ್ರತಿಭಟಿಸುವುದನ್ನೂ ತಡೆಯಲು ರಾಜಗೃಹದ ಬಳಿ ನಿಷೇಧಾಜ್ಞೆ ಜಾರಿಗೊಳಿಸಿ ದಾಳಿಯನ್ನು ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ’ ಎಂದು ಆರೋಪಿಸಿದರು.

ಮುಖಂಡರಾದ ಕಿರಣ್‍ಕುಮಾರ್, ಸಿ.ಗುರಪ್ಪ, ಗಣಂಗೂರು ವೆಂಕಟೇಶ್, ಶಿವರುದ್ರಯ್ಯ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.