ಹಾಡು ನೃತ್ಯ ಸ್ಪರ್ಧೆ: ಬಹುಮಾನ ವಿತರಣೆ

ಪೀಣ್ಯದಾಸರಹಳ್ಳಿ: ತರಬನಹಳ್ಳಿಯ ಮಿಲೇನಿಯಂ ಶಾಲೆಯಲ್ಲಿ ಟಿ.ಆರ್.ಪಿ. ಈವೆಂಟ್ಸ್ ವತಿಯಿಂದ 'ಹಾಡು, ಹೆಜ್ಜೆ' ಸ್ಪರ್ಧೆಯ 'ನಾನು ನನ್ನ ಅಮ್ಮ- ‘ನಾನು ನನ್ನ ಅಪ್ಪ' ಎಂಬ ಶೀರ್ಷಿಕೆಯ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಿತು. ಹಾಡಿನ ವಿಭಾಗದಲ್ಲಿ ಮಾಗಡಿಯ ರಾಜುಗೌಡವಿಜೇತರಾದರು. ನೃತ್ಯ ವಿಭಾಗದಲ್ಲಿ ಗೀತಾ ಬಹುಮಾನ ಗಳಿಸಿದರು.
ಗೀತಾ ಮಾತನಾಡಿ 'ಮಗಳ ಜೊತೆ ನೃತ್ಯ ಮಾಡಿದ್ದು ಖುಷಿಯಾಯಿತು. . ಅವಳೇ ಕಲಿಸಿದಳು. ಇಂದು ಅವಳ ಜತೆ ಹೆಜ್ಜೆ ಹಾಕಿದ್ದೇನೆ’ ಎಂದರು.
ರಾಜುಗೌಡ ಕೂಡಾ ಸಂತಸ ವ್ಯಕ್ತಪಡಿಸಿದರು. ಸಂಸ್ಥೆಯ ಸಂಸ್ಥಾಪಕ ತರುಣ್ ಕನ್ನಡಿಗ ಮಾತನಾಡಿ, 'ತಂದೆ, ತಾಯಿ ಮತ್ತು ಮಕ್ಕಳ ಪ್ರೀತಿ, ವಾತ್ಸಲ್ಯದ ಬಾಂಧವ್ಯ ಬೆಸೆಯಲು ಹಾಗೂ ಕೆಲಸಗಳ ಒತ್ತಡದ ಮಧ್ಯೆ ಮನರಂಜನೆಯೂ ಮುಖ್ಯ ಎಂಬ ನಿಟ್ಟಿನಲ್ಲಿ ಈ ಸ್ಪರ್ಧೆ ಏರ್ಪಡಿಸಿದ್ದೇವೆ' ಎಂದರು.
ನಟಿ ರೂಪಿಕಾ, ಸಂಗೀತ ನಿರ್ದೇಶಕ ಕೆ.ಎಂ.ಇಂದ್ರಸೇನ, ಪತ್ರಕರ್ತ ಎಂ.ಆರ್.ನದಾಫ್, ಆರ್.ಜೆ. ಜ್ಯೋತಿ, ಪ್ರಿಯಾಂಕಾ ತರುಣ್ ಬಹುಮಾನ ವಿತರಿಸಿದರು.
ಬರಹ ಇಷ್ಟವಾಯಿತೆ?
0
0
0
0
0
0 comments
View All