ಚುನಾವಣಾ ಹಬ್ಬಕ್ಕೆ ರಾಜಧಾನಿ ಸಜ್ಜು

ಶುಕ್ರವಾರ, ಏಪ್ರಿಲ್ 26, 2019
34 °C

ಚುನಾವಣಾ ಹಬ್ಬಕ್ಕೆ ರಾಜಧಾನಿ ಸಜ್ಜು

Published:
Updated:

ಬೆಂಗಳೂರು: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುವುದರೊಂದಿಗೆ ಲೋಕಸಭಾ ಚುನಾವಣೆಗೆ ಮಂಗಳವಾರ ಅಧಿಕೃತ ಚಾಲನೆ ಸಿಕ್ಕಿದೆ.

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಚುನಾವಣಾ ಸಿದ್ಧತೆ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ನಗರದ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳ ಚುನಾವಣಾ ಪ್ರಕ್ರಿಯೆ ಸಾಂಗವಾಗಿ ನಡೆಸುವುದಕ್ಕೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಜಿಲ್ಲಾ ಸಂಪರ್ಕ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಲ್ಲಿ ಸಿಬ್ಬಂದಿ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದರು.

‘ನಗರದ ವ್ಯಾಪ್ತಿಯಲ್ಲಿರುವ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 71.69 ಲಕ್ಷ ಮಂದಿ ಈ ಬಾರಿ ಮತದಾನದ ಹಕ್ಕು ಪಡೆದಿದ್ದಾರೆ. ಈ ಬಾರಿ ಅಂಗವಿಕಲ ಮತದಾರರನ್ನು ಗುರುತಿಸಿದ್ದು, ಅವರಿಗೆ ಅಗತ್ಯವಿರುವ ರ‍್ಯಾಂಪ್‌ ಮತ್ತಿತರ ವ್ಯವಸ್ಥೆ ಕಲ್ಪಿಸಲಿದ್ದೇವೆ. ಚುನಾವಣಾ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ. ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ದೂರು ನೀಡಲು ಅಥವಾ ಮಾಹಿತಿ ಪಡೆಯಲು 1950ಗೆ ಕರೆ ಮಾಡಬಹುದು’ ಎಂದು ತಿಳಿಸಿದರು.

ಭದ್ರತಾ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್‌, ‘ನಗರದಲ್ಲಿ 9 ಸಾವಿರ ಮಂದಿ ಶಸ್ತ್ರ ಪರವಾನಗಿ ಪಡೆದಿದ್ದು, ಅವರಲ್ಲಿ 7 ಸಾವಿರ ಮಂದಿ ಶಸ್ತ್ರವನ್ನು ಪೋಲೀಸ್‌ ಠಾಣೆಗೆ ತಂದೊಪ್ಪಿಸಿದ್ದಾರೆ. ಕೆಲವರಿಗೆ ರಿಯಾಯಿತಿ ನೀಡಲಾಗಿದೆ. ರೌಡಿ ಪಟ್ಟಿಯಲ್ಲಿರುವ 5 ಸಾವಿರ ಮಂದಿಯ ಚಟುವಟಿಕೆ ಮೇಲೆ ನಿಗಾ ಇಟ್ಟಿದ್ದೇವೆ. ಪೂರ್ವ ವಿಭಾಗದಲ್ಲಿ ಒಬ್ಬ ವ್ಯಕ್ತಿಯನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿದ್ದೇವೆ’ ಎಂದರು.  

₹1.69 ಕೋಟಿ ನಗದು, ₹ 3.99 ಕೋಟಿ ಮೌಲ್ಯ ಮದ್ಯ ವಶ: ನಗರದ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಇದುವರೆಗೆ 465 ಅಬಕಾರಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.  ₹1.69 ಕೋಟಿ ನಗದು ಹಾಗೂ 84,549 ಲೀ ಮದ್ಯ ವಶಪಡಿಸಿಕೊಳ್ಳಲಾಗಿದೆ. ಮದ್ಯದ ಮೌಲ್ಯ ₹ 3.99 ಕೋಟಿ ಎಂದು ಮಂಜುನಾಥ ಪ್ರಸಾದ್‌ ಮಾಹಿತಿ ನೀಡಿದರು.  

ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ: ಚುನಾವಣಾ ಪ್ರಚಾರ ಸಭೆ ಮತ್ತು ಇತರ ಕಾರ್ಯಕ್ರಮಗಳಿಗೆ ಆನ್‌ಲೈನ್‌ ಮೂಲಕವೂ ಅರ್ಜಿ ಹಾಗೂ ದಾಖಲೆ ಸಲ್ಲಿಸಬಹುದು. ಅನುಮತಿ ನೀಡುವ ಪ್ರಕ್ರಿಯೆಯನ್ನು ಸುವಿಧಾ ತಂತ್ರಾಂಶದ ಮೂಲಕ ನಿರ್ವಹಿಸಲಿದ್ದೇವೆ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.  

ಅದಮ್ಯ ಚೇತನದ ಬಿಸಿಯೂಟ ಪೂರೈಕೆಗೆ ತಕರಾರು?

ಅದಮ್ಯ ಚೇತನ ಸಂಸ್ಥೆ ಮೂಲಕ ನಗರದ ಕೆಲವು ಶಾಲೆಗಳಿಗೆ ಬಿಸಿಯೂಟ ಪೂರೈಸಲಾಗುತ್ತಿದೆ. ಈ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ನಿರೀಕ್ಷೆ ಇದೆ. ಹಾಗಾಗಿ, ಈ ಸಂಸ್ಥೆಯ ಮೂಲಕ ಊಟ ಪೂರೈಕೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಂಜುನಾಥ ಪ್ರಸಾದ್‌, ‘ಈ ಬಗ್ಗೆ ಚುನಾವಣಾ ಆಯುಕ್ತರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ನಾಮಪತ್ರ ಸಲ್ಲಿಕೆ: ಕಟ್ಟುಪಾಡುಗಳೇನು?

* ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆ ನಡುವೆ ಮಾತ್ರ ಸ್ವೀಕಾರ

* ನಾಮಪತ್ರ ಸಲ್ಲಿಸಲು ಅಭ್ಯರ್ಥಿ ಸೇರಿದಂತೆ 5 ಜನರಿಗೆ ಮಾತ್ರ ಅವಕಾಶ

* ಇದೇ 23ರಂದು (ನಾಲ್ಕನೇ ಶನಿವಾರ) ನಾಮಪತ್ರ ಸ್ವೀಕಾರ ಇಲ್ಲ.

* ಚುನಾವಣಾಧಿಕಾರಿ ಕಚೇರಿಯ 100 ಮೀ ವ್ಯಾಪ್ತಿಯ ಒಳಗೆ 3 ವಾಹನಗಳಿಗೆ ಮಾತ್ರ ಪ್ರವೇಶ

* ಅಭ್ಯರ್ಥಿಯ ಆಸ್ತಿ, ಕ್ರಿಮಿನಲ್ ಮೊಕದ್ದಮೆ ವಿವರ ಹಾಗೂ ಕುಟುಂಬದವರ 5 ವರ್ಷಗಳ ಆದಾಯ ಬಹಿರಂಗಪಡಿಸಬೇಕು.

* ಅಭ್ಯರ್ಥಿ ಮೇಲಿರುವ ಕ್ರಮಿನಲ್ ಮೊಕದ್ದಮೆ ಕುರಿತು ಮೂರು ಸಲ ಪತ್ರಿಕೆ/ಟಿವಿಗಳಲ್ಲಿ ಜಾಹೀರಾತು ನೀಡಬೇಕು.

₹1.69 ಕೋಟಿ ನಗದು, ₹ 3.99 ಕೋಟಿ ಮೌಲ್ಯ ಮದ್ಯ ವಶ

ನಗರದ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಇದುವರೆಗೆ 465 ಅಬಕಾರಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ₹1.69 ಕೋಟಿ ನಗದು ಹಾಗೂ 84,549 ಲೀ ಮದ್ಯ ವಶಪಡಿಸಿಕೊಳ್ಳಲಾಗಿದೆ. ಮದ್ಯದ ಮೌಲ್ಯ ₹ 3.99 ಕೋಟಿ ಎಂದು ಮಂಜುನಾಥ ಪ್ರಸಾದ್‌ ಮಾಹಿತಿ ನೀಡಿದರು.

ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ

ಚುನಾವಣಾ ಪ್ರಚಾರ ಸಭೆ ಮತ್ತು ಇತರ ಕಾರ್ಯಕ್ರಮಗಳಿಗೆ ಆನ್‌ಲೈನ್‌ ಮೂಲಕವೂ ಅರ್ಜಿ ಹಾಗೂ ದಾಖಲೆ ಸಲ್ಲಿಸಬಹುದು. ಅನುಮತಿ ನೀಡುವ ಪ್ರಕ್ರಿಯೆಯನ್ನು ಸುವಿಧಾ ತಂತ್ರಾಂಶದ ಮೂಲಕ ನಿರ್ವಹಿಸಲಿದ್ದೇವೆ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.

ಹೊಸಕೋಟೆ: 2.12 ಲಕ್ಷ ಮತದಾರರು

ಹೊಸಕೋಟೆ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯು ಸುಗಮವಾಗಿ ನಡೆಸಲು ಎಲ್ಲ ರಾಜಕೀಯ ಪಕ್ಷಗಳು ಸಹಕರಿಸಬೇಕೆಂದು ಹೊಸಕೋಟೆ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ತಬಸ್ಸುಮ್ ಜಹೆರಾ ಮನವಿ ಮಾಡಿದರು.

‘ಹೊಸಕೋಟೆ ವಿಧಾನಸಭಾ ವ್ಯಾಪ್ತಿಯಲ್ಲಿ 178 ಮತಗಟ್ಟೆಗಳಿವೆ. 2,12,437 ಮತದಾರರಿದ್ದಾರೆ. ಈ ಪೈಕಿ 1,07,729 ಪುರುಷರು ಹಾಗೂ 1,04,683 ಮಹಿಳಾ ಮತದಾರರು, 25 ತೃತೀಯ ಲಿಂಗಿ ಮತದಾರರು ಇದ್ದಾರೆ’ ಎಂದು ಪತ್ರಿಕಾ ಪ್ರತಿನಿಧಿಗಳಿಗೆ ತಿಳಿಸಿದರು.

‘ಆರು ಸಖಿ ಮತಗಟ್ಟೆಗಳು ಇರಲಿದ್ದು, ಆ ಮತಗಟ್ಟೆಗಳ ಪೂರ್ಣ ನಿರ್ವಹಣೆಯನ್ನು ಮಹಿಳೆಯರೇ ಮಾಡುತ್ತಾರೆ. ಎಲ್ಲ ಮತಗಟ್ಟೆಗಳು ಮತದಾರ ಸ್ನೇಹಿಯಾಗಿ ಇರುತ್ತವೆ. ಮಹಿಳೆಯರಿಗೆ, ವೃದ್ಧರಿ. ಎಂದರು.

‘ಒಂದು ಮತಗಟ್ಟೆಯನ್ನು ಅಂಗವಿಕಲ ಸಿಬ್ಬಂದಿಯೇ ಪೂರ್ಣ ನಿರ್ವಹಿಸುತ್ತಾರೆ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !