ಮತ ಹಾಕಿ ಮಾದರಿಯಾಗಿ - ರಾಕೇಶ್‌ ಮಯ್ಯ

ಗುರುವಾರ , ಏಪ್ರಿಲ್ 25, 2019
29 °C

ಮತ ಹಾಕಿ ಮಾದರಿಯಾಗಿ - ರಾಕೇಶ್‌ ಮಯ್ಯ

Published:
Updated:
Prajavani

‘ಮತದಾನ’ ಸಂವಿಧಾನ ನಮಗೆ ನೀಡಿದ ಹಕ್ಕು. ಒಂದು ವೇಳೆ ನಾವು ಮತದಾನದಲ್ಲಿ ಭಾಗಿಯಾಗದಿದ್ದರೆ ತಪ್ಪು ವ್ಯಕ್ತಿ ಆಯ್ಕೆಯಾಗುವ ಸಾಧ್ಯತೆಗಳಿರುತ್ತವೆ. ನಿಮ್ಮ ಒಂದು ಮತ ಉತ್ತಮ ನಾಯಕನನ್ನು ಆಯ್ಕೆ ಮಾಡಬಲ್ಲದು.

ನಮ್ಮ ಹಕ್ಕನ್ನು ಸರಿಯಾಗಿ ಚಲಾಯಿಸದಿದ್ದರೆ, ರಾಜಕಾರಣಿಗಳನ್ನು ದೂರುವ ಹಕ್ಕೂ ನಮಗಿರುವುದಿಲ್ಲ. ಇತರರಿಗೆ ಮತ ಹಾಕಿ ಎಂದು ಉಪದೇಶಿಸುವ ಮೊದಲು, ನಾವು ಮತದಾನ ಮಾಡಿ ಇತರರಿಗೆ ಮಾದರಿಯಾಗಬೇಕು.  ಚುನಾವಣೆಗೆ ನಿಂತ ಅಭ್ಯರ್ಥಿ ತನ್ನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳೇನು? ಆತನ ವ್ಯಕ್ತಿತ್ವ, ಸಾಮರ್ಥ್ಯದ ಕುರಿತು ಯೋಚಿಸಿ ಸರಿಯಾದವರನ್ನೇ ಆಯ್ಕೆ ಮಾಡುವುದು ನಮ್ಮ ಹೊಣೆ. ಆಶ್ವಾಸನೆ ನೀಡುವವರಿಗೆ ಮತ ಹಾಕದೇ ದೇಶಕ್ಕಾಗಿ ದುಡಿಯುವ ಅಭ್ಯರ್ಥಿಗೆ ವೋಟ್‌ ಹಾಕಿ. ಸಾಮಾಜಿಕ ಜವಾಬ್ದಾರಿ ನಿಭಾಯಿಸಿ.

– ರಾಕೇಶ್‌ ಮಯ್ಯ, ಕಿರುತೆರೆ ನಟ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !