ಗುರುವಾರ , ನವೆಂಬರ್ 21, 2019
22 °C

ಚರ್ಚಾ ಸ್ಪರ್ಧೆ: ಉನ್ನತಿಗೆ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ಅಮೆರಿಕ- ಭಾರತ ಸಂವಿಧಾನಾತ್ಮಕ ಕಾನೂನಿನ ತುಲನಾತ್ಮಕ ಚರ್ಚಾ ಸ್ಪರ್ಧೆಯಲ್ಲಿ ನಗರದ ರಾಷ್ಟ್ರೀಯ ಕಾನೂನು ಶಾಲೆಯ ವಿದ್ಯಾರ್ಥಿನಿ ಉನ್ನತಿ ಆಶೀಶ್‌ ಘಿಯಾ ವಿಜೇತರಾಗಿದ್ದಾರೆ. 

ಅಮೆರಿಕದ ರಾಯಭಾರ ಕಚೇರಿಯು ಚೆನ್ನೈನ ಲೊಯೊಲಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ತಮಿಳುನಾಡು, ಕರ್ನಾಟಕ ಮತ್ತು ಕೇರಳದ 16 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಅಮೆರಿಕ ರಾಯಭಾರಿ ರಾಬರ್ಟ್‌ ಬರ್ಜಸ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. 

‘ವಿಶ್ವದ ಅತ್ಯಂತ ಹಳೆಯ ಮತ್ತು ಅತ್ಯಂತ ದೊಡ್ಡ ಪ್ರಜಾಪ್ರಭುತ್ವಗಳನ್ನು ಹೊಂದಿರುವ ಅಮೆರಿಕ ಮತ್ತು ಭಾರತದ ನಡುವೆ ಗಾಢವಾದ ಸಂಬಂಧವಿದೆ. ದಕ್ಷಿಣ ಭಾರತದ ರಾಜ್ಯಗಳ ಜತೆಗೂಡಿ ಪ್ರಜಾಪ್ರಭುತ್ವದ ಮೌಲ್ಯಗಳು, ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಚಿಂತನೆಗೆ ಹಚ್ಚುವ ‌ಈ ಸ್ಪರ್ಧೆಯನ್ನು ಆಯೋಜಿಸಿದ್ದು ಸಂತಸ ತಂದಿದೆ’ ಎಂದು ರಾಬರ್ಟ್‌ ಹೇಳಿದರು. 

ಪ್ರತಿಕ್ರಿಯಿಸಿ (+)