ಅಪಘಾತ: ಚಾಲಕ ದುರ್ಮರಣ

ಗುರುವಾರ , ಏಪ್ರಿಲ್ 25, 2019
31 °C

ಅಪಘಾತ: ಚಾಲಕ ದುರ್ಮರಣ

Published:
Updated:

ಬೆಂಗಳೂರು: ಯಲಹಂಕ ವೃತ್ತದಲ್ಲಿ ನಿಂತಿದ್ದ ಲಾರಿಗೆ ಟ್ರಕ್‌ ಡಿಕ್ಕಿ ಹೊಡೆದಿದ್ದರಿಂದ, ಟ್ರಕ್‌ನ ಚಾಲಕ ಮಂಜುನಾಥ್ (34) ಸ್ಥಳದಲ್ಲೇ ದುರ್ಮರಣಕ್ಕೆ ಈಡಾಗಿದ್ದಾರೆ.

ಗೌರಿಬಿದನೂರು ಬಳಿಯ ದೊಡ್ಡೂರಿನ ನಿವಾಸಿಯಾದ ಮಂಜುನಾಥ್, ಟ್ರಕ್‌ನಲ್ಲಿ ಸಿಮೆಂಟ್ ಸಾಗಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

‘ಲಾರಿ ಚಲಾಯಿಸಿಕೊಂಡು ಯಲಹಂಕ ವೃತ್ತಕ್ಕೆ ಬಂದಿದ್ದ ಅದರ ಚಾಲಕ, ರಸ್ತೆ ಪಕ್ಕದಲ್ಲಿ ಲಾರಿ ನಿಲ್ಲಿಸಿ ಬೇರೆಡೆ ಹೋಗಿದ್ದರು.

ಅದೇ ರಸ್ತೆ ಮಾರ್ಗವಾಗಿ ಮಂಜುನಾಥ್, ಟ್ರಕ್‌ ಚಲಾಯಿಸಿಕೊಂಡು ಬರುತ್ತಿದ್ದರು. ಭಾನುವಾರ ರಾತ್ರಿ 11ರ ಸುಮಾರಿಗೆ ಲಾರಿಗೆ, ಟ್ರಕ್‌ ಡಿಕ್ಕಿ ಹೊಡೆದಿತ್ತು’ ಎಂದು ಯಲಹಂಕ ಸಂಚಾರ ಪೊಲೀಸರು ಹೇಳಿದರು.

‘ಡಿಕ್ಕಿಯ ರಭಸಕ್ಕೆ ಟ್ರಕ್ ಸಂಪೂರ್ಣ ನಜ್ಜುಗುಜ್ಜಾಯಿತು.

ಲಾರಿನ ಹಿಂಭಾಗ ಸಹ ಜಖಂಗೊಂಡಿತು. ಟ್ರಕ್‌ ಒಳಗೆಯೇ ಸಿಲುಕಿ ತೀವ್ರವಾಗಿ ಗಾಯಗೊಂಡ ಮಂಜುನಾಥ್, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆ ಪಡೆಯಲಾಗಿದೆ’ ಎಂದರು.   

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !