ಸೋಮವಾರ, ಮೇ 17, 2021
23 °C

ಏರ್‌ ಶೋ: ಬಲೂನು, ಡ್ರೋನ್ ಹಾರಾಟಕ್ಕೆ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಏರ್‌–ಶೋ ನಿಗದಿಯಾಗಿರುವ ದಿನಗಳಂದು (ಫೆ.20 ರಿಂದ 24ರವರೆಗೆ) ಯಲಹಂಕ ವಾಯುನೆಲೆ ಸುತ್ತಮುತ್ತ ಬಲೂನು ಹಾಗೂ ಡ್ರೋನ್ ಕ್ಯಾಮೆರಾ ಹಾರಿಸುವುದನ್ನು ನಿಷೇಧಿಸಿ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

‘ಕೆಲ ಡ್ರೋನ್‌ಗಳು 2 ಕಿ.ಮೀನಷ್ಟು ಎತ್ತರಕ್ಕೆ ಹಾರುವ ಸಾಮರ್ಥ್ಯ ಹೊಂದಿರುತ್ತವೆ. ಏರ್‌–ಶೋ ವೇಳೆ ವಾಯುನೆಲೆ ಸುತ್ತಮುತ್ತ ನಿತ್ಯ ಹತ್ತಾರು ವಿಮಾನಗಳು ಹಾರಾಟ ನಡೆಸುತ್ತವೆ. ಒಂದು ವೇಳೆ ವಿಮಾನಕ್ಕೆ ಡ್ರೋನ್ ಬಡಿದರೆ, ದೊಡ್ಡ ಅನಾಹುತವೇ ಸಂಭವಿಸಬಹುದು. ಹೀಗಾಗಿ, ಅದಕ್ಕೆ ನಿರ್ಬಂಧ ಹೇರಲಾಗಿದೆ’ ಎಂದು ಕಮಿಷನರ್ ಹೇಳಿದ್ದಾರೆ.

‘ಹೀಲಿಯಂ ತುಂಬಿದ ಬಲೂನುಗಳನ್ನು ಹಾರಿಬಿಡುವ ಮೂಲಕ ಕೆಲ ಸಮಾರಂಭಗಳನ್ನು ಉದ್ಘಾಟನೆ ಮಾಡಲಾಗುತ್ತದೆ. ಅವು ತುಂಬ ಎತ್ತರಕ್ಕೆ ಹೋಗುವುದರಿಂದ ವಿಮಾನಗಳ ಹಾರಾಟಕ್ಕೆ ತೊಂದರೆಯಾಗಬಹುದು.ಹೀಗಾಗಿ, ಬಲೂನು ಬಳಕೆಯನ್ನೂ ಮಾಡುವಂತಿಲ್ಲ. ಆದೇಶ ಉಲ್ಲಂಘನೆ ಮಾಡಿದರೆ ಬಂಧಿಸಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು