‘ಬಜಾಜ್‌ ಕ್ಯೂಟ್‌’ನೊಂದಿಗೆ ಬಂದ ಉಬರ್

ಗುರುವಾರ , ಜೂನ್ 27, 2019
25 °C
ಇಂದಿರಾನಗರ ಮತ್ತು ಕೋರಮಂಗಲದಲ್ಲಿ ಸೇವೆ ಆರಂಭ

‘ಬಜಾಜ್‌ ಕ್ಯೂಟ್‌’ನೊಂದಿಗೆ ಬಂದ ಉಬರ್

Published:
Updated:
Prajavani

ಬೆಂಗಳೂರು: ಮೊಬೈಲ್ ಆ್ಯಪ್‌ ಮೂಲಕ ಕ್ಯಾಬ್‌ ಸೇವೆ ಒದಗಿಸುವ ಉಬರ್‌ ಕಂಪನಿ, ‘ಬಜಾಜ್‌ ಕ್ಯೂಟ್‌’ ವಾಹನದೊಂದಿಗೆ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದೆ.

‘ನಗರದೊಳಗೆ ಸಂಚರಿಸಲು ಹೇಳಿ ಮಾಡಿಸಿದ ವಿನ್ಯಾಸ ಹೊಂದಿರುವ ಬಜಾಜ್‌ ಕ್ಯೂಟ್‌ ಸದ್ಯ ಇಂದಿರಾನಗರ ಮತ್ತು ಕೋರಮಂಗಲದಲ್ಲಿ ಸಂಚಾರ ಆರಂಭಿಸಿದೆ. ನಗರದ ಎಲ್ಲ ಕಡೆ ಶೀಘ್ರದಲ್ಲಿಯೇ ಸೇವೆ ಆರಂಭಿಸ
ಲಾಗುವುದು’ ಎಂದು ಉಬರ್‌ ವ್ಯಾಪಾರ ಅಭಿವೃದ್ಧಿ ವಿಭಾಗದ ಮುಖ್ಯಸ್ಥೆ ನಂದಿನಿ ಮಹೇಶ್ವರಿ ಹೇಳಿದರು. 

‘ಬಜಾಜ್‌ನೊಂದಿಗೆ ಒಪ್ಪಂದ ಮಾಡಿಕೊಂಡು ಈ ಹೊಸ ವಾಹನವನ್ನು ನಾವು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ನಾಲ್ಕು ಚಕ್ರಗಳ ವಾಹನವಾದರೂ ಇದು ಕಾರ್‌ ಅಲ್ಲ. ವೆಚ್ಚ ಮತ್ತು ನಿರ್ವಹಣೆ ವಿಷಯ ಪರಿಗಣಿಸಿದರೆ ಆಟೊ ರಿಕ್ಷಾವನ್ನು ಹೋಲುತ್ತದೆ. ಆದರೆ, ಇದು ಆಟೊ ಅಲ್ಲ. ನೂತನ ತಂತ್ರಜ್ಞಾನದ ಜೊತೆಗೆ, ಪ್ರಯಾಣಿಕ ಸ್ನೇಹಿ ಲಕ್ಷಣಗಳನ್ನು ಇದು ಹೊಂದಿದೆ’ ಎಂದು ಅವರು ವಿವರಿಸಿದರು. 

‘ಒಂದು ನಿರ್ದಿಷ್ಟ ದೂರದ ಸ್ಥಳಕ್ಕೆ ತೆರಳಲು ಆಟೊದಲ್ಲಿ ₹234 ಆದರೆ, ಸಾಮಾನ್ಯ ಕಾರಿನಲ್ಲಿ ₹361 ಆಗುತ್ತದೆ. ಬಜಾಜ್‌ ಕ್ಯೂಟ್‌ನಲ್ಲಿ ₹265ಗೆ ಆಗುತ್ತದೆ’ ಎಂದು ಅವರು ಮಾಹಿತಿ ನೀಡಿದರು. 

‘ಬಜಾಜ್‌ ಕ್ಯೂಟ್‌ನ ಎಲೆಕ್ಟ್ರಿಕ್‌ ವಾಹನದ ಷೋ ರೂಂ ದರ ₹2.83 ಲಕ್ಷವಿದ್ದರೆ, ಪೆಟ್ರೋಲ್‌ ವಾಹನದ
ದರ ₹2.63 ಲಕ್ಷವಿದೆ. ಉಬರ್‌ನೊಂದಿಗೆ ಬಜಾಜ್‌ ಈ ಒಪ್ಪಂದ ಮಾಡಿಕೊಂಡಿದ್ದು, ಸದ್ಯ ಉಬರ್‌ ಹೆಸರಿನಡಿ ಮಾತ್ರ ಇವು ಸಂಚರಿಸಲಿವೆ’ ಎಂದು ಉಬರ್‌ನ ನಿರ್ದೇಶಕ ಸತಿಂದರ್‌ ಬಿಂದ್ರಾ ತಿಳಿಸಿದರು.

ಬಜಾಜ್‌ ಕ್ಯೂಟ್‌ ಲಕ್ಷಣಗಳು ಮತ್ತು ಅನುಕೂಲ

* 216 ಸಿ.ಸಿ ಎಂಜಿನ್‌ ಹೊಂದಿದ್ದು, ಹಗುರ (452 ಕೆ.ಜಿ) ವಾ‌ಹನವಾಗಿದೆ

* ಪ್ರತಿ ಲೀಟರ್‌ಗೆ 35 ಕಿ.ಮೀ. ಮೈಲೇಜ್‌ ಕೊಡುತ್ತದೆ. ಯಾವುದೇ ಪ್ರಸಿದ್ಧ ಕಾರುಗಳಿಗೆ ಹೋಲಿಸಿದರೆ, ಇದು ಶೇ 60ರಷ್ಟು ಹೆಚ್ಚು

* ಗೇರ್‌ಗಳನ್ನು ಬದಲಾಯಿಸುವುದು ಸುಲಭ

* ಇಕ್ಕಟ್ಟಿನ ರಸ್ತೆಗಳಲ್ಲೂ ಇದನ್ನು ಓಡಿಸುವುದು ಸುಲಭ

* ಪಾರ್ಕಿಂಗ್‌ಗೆ ಕಡಿಮೆ ಜಾಗ ಸಾಕಾಗುತ್ತದೆ

* ನಿರ್ವಹಣಾ ವೆಚ್ಚ ಕಡಿಮೆ

* ಭಾರತದಲ್ಲಿಯೇ ತಯಾರಾಗಿರುವುದರಿಂದ ಬಿಡಿ ಭಾಗಗಳು ಸುಲಭವಾಗಿ ಸಿಗಲಿವೆ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !