ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಾಗ್ನೋಸ್ಟಿಕ್ ಕೇಂದ್ರಕ್ಕೆ ₹ 1ಲಕ್ಷ ದಂಡ

Last Updated 23 ಮಾರ್ಚ್ 2019, 19:59 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡದ ಆರೋಪದ ಮೇಲೆ ರಾಜಾಜಿನಗರದ ಡಯಾಗ್ನೋಸ್ಟಿಕ್ ಮತ್ತು ಸ್ಪೆಷಾಲಿಟಿ ಕ್ಲಿನಿಕ್‌ಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ₹1 ಲಕ್ಷ ದಂಡ ವಿಧಿಸಿದ್ದಾರೆ.

‘ಮನೆ ಮನೆಯಿಂದ ಸಂಗ್ರಹಿಸುವ ಆಟೊರಿಕ್ಷಾದಲ್ಲಿ ಶುಕ್ರವಾರ ವೈದ್ಯಕೀಯ ತ್ಯಾಜ್ಯ ಪತ್ತೆಯಾಗಿತ್ತು. ಪರಿಶೀಲಿಸಿದಾಗ ಅದು ಫೋಕಸ್‌ ಡಯಾಗ್ನೋಸ್ಟಿಕ್ ಕೇಂದ್ರದ್ದು ಎಂದು ತಿಳಿದುಬಂತು. ಅವರಿಗೆ ನೋಟಿಸ್‌ ನೀಡಿದ್ದೇವೆ. 1986ರ ಪರಿಸರ ಸಂರಕ್ಷಣಾ ಕಾಯ್ದೆ ಅಡಿ ದಂಡ ವಿಧಿಸಿದ್ದೇವೆ’ ಎಂದು ಆರೋಗ್ಯಾಧಿಕಾರಿ ಬಾಲಸುಂದರ್ ತಿಳಿಸಿದರು.

‘ಹೊಸ ಸಿಬ್ಬಂದಿಯೊಬ್ಬರ ತಪ್ಪಿನಿಂದ ಹೀಗಾಗಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುತ್ತೇವೆ ಎಂದು ಡಯಾಗ್ನೋಸ್ಟಿಕ್ ಕೇಂದ್ರದ ಮಾಲೀಕರು ತಿಳಿಸಿದ್ದಾರೆ’ ಎಂದರು.

ಡಯಾಗ್ನೋಸ್ಟಿಕ್ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ರತ್ನಾಕರ ಹೆಗ್ಡೆ ಬಿಬಿಎಂಪಿಯ ಆರೋಪ ಅಲ್ಲಗಳೆದಿದ್ದು, ‘ಬಿಬಿಎಂಪಿಯವರೇ ವೈದ್ಯಕೀಯ ತ್ಯಾಜ್ಯವನ್ನು ಮನೆಮನೆಯಿಂದ ಕಸ ಸಂಗ್ರಹಿಸುವ ವಾಹನದಲ್ಲಿ ಸೇರಿಸಿದ್ದಾರೆ’ ಎಂದುಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಾಲಸುಂದರ್ ‘ಇದೊಂದು ಆಧಾರರಹಿತ ಆರೋಪ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT