ವಾಣಿಜ್ಯ ಚಟುವಟಿಕೆ ವಿರೋಧಿಸಿ ಪ್ರತಿಭಟನೆ

7

ವಾಣಿಜ್ಯ ಚಟುವಟಿಕೆ ವಿರೋಧಿಸಿ ಪ್ರತಿಭಟನೆ

Published:
Updated:
Deccan Herald

ಬೆಂಗಳೂರು: ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಿರುವುದನ್ನು ವಿರೋಧಿಸಿ ಇಂದಿರಾನಗರದ ನಿವಾಸಿಗಳು ಇದೇ 11ರಂದು (ಶನಿವಾರ) ಸಂಜೆ 5ಗಂಟೆಗೆ ಇಂದಿರಾನಗರದ ಬಿಡಿಎ ಕಾಂಪ್ಲೆಕ್ಸ್‌ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಐ ಚೇಂಜ್‌ ಇಂದಿರಾನಗರ ಮತ್ತು ಯುನೈಡೆಟ್‌ ಬೆಂಗಳೂರು ಜಂಟಿಯಾಗಿ ಈ ಪ್ರತಿಭಟನೆ ಆಯೋಜಿಸಿದೆ. 

ಭಿನ್ನಮಂಗಲ ಕೆರೆ ಅಂಚಿನಲ್ಲಿರುವ ಬಿಡಿಎ ಕಾಂಪ್ಲೆಕ್ಸ್‌ ಅಭಿವೃದ್ಧಿಗಾಗಿ 171 ಮರಗಳನ್ನು ಕಡಿಯಲಾಗುತ್ತಿದೆ ಹಾಗೂ ಕೆರೆ ಮೀಸಲು ಪ್ರದೇಶ (ಬಫರ್‌ ಜೋನ್‌) ಕುರಿತು ಎನ್‌ಜಿಟಿ ನೀಡಿದ ಆದೇಶ ಉಲ್ಲಂಘನೆಯಾಗುತ್ತಿದೆ.

ಆಡಳಿತ ವ್ಯವಸ್ಥೆಯ ಈ ಧೋರಣೆ ವಿರುದ್ಧ ನಮ್ಮ ಪ್ರತಿಭಟನೆಯನ್ನು ದಾಖಲಿಸಲಿದ್ದೇವೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !