ಗುರುವಾರ , ಜೂನ್ 4, 2020
27 °C

ಕೋವಿಡ್–19: ಮೀನುಗಾರರ ಮೇಲೆ ಗುಂಪು ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಕೋವಿಡ್–19 ಸೋಂಕು ಹರಡುವಿಕೆ ತಡೆಗಟ್ಟಲು ಲಾಕ್‌ಡೌನ್ ಆದೇಶವಿದ್ದರೂ ಹೊರಗೆ ಅಡ್ಡಾಡುತ್ತಿದ್ದಾರೆ ಎಂದು ಆರೋಪಿಸಿ ಮುಧೋಳ ತಾಲ್ಲೂಕು ಬಿದರಿ ಬಳಿ ನಾಲ್ವರು ಮೀನುಗಾರರನ್ನು ಗುಂಪೊಂದು ಥಳಿಸಿದೆ. ಆ ವಿಡಿಯೊ ಈಗ ವೈರಲ್ ಆಗಿದೆ.

ಬಿದರಿ ಸಮೀಪ ಘಟಪ್ರಭಾ ನದಿಗೆ ಭಾನುವಾರ ಬೆಳಿಗ್ಗೆ ಮೀನು ಹಿಡಿಯಲು ಹೋಗಿದ್ದ ಮಹಾಲಿಂಗಪುರದ ಮೀನುಗಾರರಾದ ಹುಸೇನ್‌ಸಾಬ್ ಹಾಗೂ ಪುತ್ರ ಹಾಸಿಂ, ಕಿರಣ್ ಮತ್ತು ರಾಕೇಶ್ ಎಂಬುವವರನ್ನು ಥಳಿಸಲಾಗಿದೆ.

ಬೈಕ್‌ನಲ್ಲಿ ಬಂದ ಮೀನುಗಾರರನ್ನು ಘಟಪ್ರಭಾ ನದಿಯ ಸೇತುವೆ ಬಳಿ ಅಡ್ಡ ಹಾಕುವ ಗುಂಪು, ’ನಿಮ್ಮಿಂದಲೇ ದೇಶದಲ್ಲಿ ರೋಗ ಹರಡುತ್ತಿದೆ. ಮನೆಯೊಳಗೆ ಇರಲು ಹೇಳಿದರೂ ಕೇಳುತ್ತಿಲ್ಲ. ನಮಗೂ ಹಚ್ಚುತ್ತೀರಿ‘ ಎಂದು ನಿಂದಿಸುತ್ತದೆ. ಈ ವೇಳೆ ವ್ಯಕ್ತಿಯೊಬ್ಬ ಅವರನ್ನು ಕೋಲಿನಿಂದ ಹೊಡೆಯುತ್ತಾನೆ. ನಂತರ ಎಲ್ಲರ ಮೊಬೈಲ್ ಸಂಖ್ಯೆಗಳನ್ನು ಪಡೆದು ಎಚ್ಚರಿಕೆ ನೀಡಿ ಕಳುಹಿಸಲಾಗುತ್ತದೆ.

ಕಾನೂನು ಕೈಗೆತ್ತಿಕೊಂಡರೆ ಸುಮ್ಮನಿರೊಲ್ಲ:

ಕೋವಿಡ್–19 ನೆಪದಲ್ಲಿ ಯಾರಾದರೂ ಕಾನೂನು ಕೈಗೆತ್ತಿಕೊಂಡರೆ, ಸಾಮಾಜಿಕ ಜಾಲ ತಾಣದಲ್ಲಿ ಕೋಮು ದ್ವೇಷದ ಸಂದೇಶಗಳ ಹರಡಿದರೆ ಸುಮ್ಮನಿರೊಲ್ಲ. ಯಾರ ಬಗ್ಗೆಯಾದರೂ ಅನುಮಾನಗಳು ಇದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಎಸ್ಪಿ ಲೋಕೇಶ ಜಗಲಾಸರ್ ಪ್ರಕಟಣೆ ನೀಡಿದ್ದಾರೆ.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.