ಬುಧವಾರ, ಅಕ್ಟೋಬರ್ 16, 2019
21 °C
ಪ್ರತಿ ನಿತ್ಯ ರಾತ್ರಿ 8ರಿಂದ ಪ್ರಸಾರ

ಇಂದಿನಿಂದ ಗಾನ ಚಂದನ

Published:
Updated:

ಬೆಂಗಳೂರು: ದೂರದರ್ಶನ ಚಂದನ ವಾಹಿನಿಯಲ್ಲಿ ಬುಧವಾರದಿಂದ (ಅ.2) ‘ಗಾನ ಚಂದನ-ಕರುನಾಡ ಗಾನತಾರೆ' ರಿಯಾಲಿಟಿ ಶೋ ಪ್ರಾರಂಭವಾಗಲಿದೆ. 

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಹಿನಿಯ ಹೆಚ್ಚುವರಿ ನಿರ್ದೇಶಕ ರಾಜ್‌ಕುಮಾರ್ ಉಪಾಧ್ಯಾಯ, ‘ಆಕಾಶವಾಣಿಯ ನುರಿತ ಸಂಗೀತಗಾರರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಡಿಶನ್ ನಡೆಸುವ ಮೂಲಕ 15 ಪ್ರತಿಭಾವಂತ ಹಾಡುಗಾರರನ್ನು ಆಯ್ಕೆ ಮಾಡಲಾಗಿದೆ. ಈ ಕಾರ್ಯಕ್ರಮವು ಪ್ರತಿದಿನ ರಾತ್ರಿ 8ರಿಂದ 9 ಗಂಟೆವರೆಗೆ ನಡೆಯಲಿದೆ. ತೀರ್ಪುಗಾರರಾಗಿ ಗಾಯಕಿ ಬಿ.ಆರ್. ಛಾಯಾ ಮತ್ತು ಸಂಗೀತ ನಿರ್ದೇಶಕ ವಿ. ಮನೋಹರ್ ಭಾಗವಹಿಸಲಿದ್ದಾರೆ. ನಟ ವಿಕ್ರಮ್ ಸೂರಿ ಮತ್ತು ನಮಿತ ರಾವ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ’ ಎಂದು ಹೇಳಿದರು.

‘130ರಿಂದ 140 ಭಾಗಗಳು ನಡೆಯಲಿದ್ದು, ಅಂತಿಮವಾಗಿ ಆಯ್ಕೆಗೊಂಡ ಇಬ್ಬರು ಸ್ಪರ್ಧಿಗಳಲ್ಲಿ ಒಬ್ಬರನ್ನು ಕರುನಾಡ ಗಾನತಾರೆ ಎಂದು ಘೋಷಿಸಿ, ₹ 1 ಲಕ್ಷ ನಗದು ಬಹುಮಾನ ನೀಡಲಾಗುವುದು. ರನ್ನರ್ ಅಪ್‌ಗೆ ₹ 50 ಸಾವಿರ ಬಹುಮಾನ ನೀಡಿ ಪುರಸ್ಕರಿಸಲಾಗುತ್ತದೆ’ ಎಂದರು. 

Post Comments (+)