ಭಾನುವಾರ, ಆಗಸ್ಟ್ 25, 2019
21 °C

ರೈತರಿಗೆ ಹಣ್ಣಿನ ಗಿಡಗಳ ಉಚಿತ ವಿತರಣೆ

Published:
Updated:
Prajavani

ದಾಬಸ್ ಪೇಟೆ: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ದಾಬಸ್ ಪೇಟೆ ಸುತ್ತಮುತ್ತಲ ರೈತರಿಗೆ ಉಚಿತವಾಗಿ ಹಣ್ಣಿನ ಗಿಡಗಳನ್ನು ವಿತರಿಸಲಾಗುತ್ತಿದೆ.

’ರೈತರ ಕೃಷಿ ಚಟುವಟಿಕೆಗೆ ನೆರವಾಗುವ ಹಾಗೂ ಅವರಿಗೆ ಆರ್ಥಿಕವಾಗಿ ಸಹಾಯವಾಗುವ ದೃಷ್ಟಿಯಿಂದ ಜಮೀನಿನಲ್ಲಿ ಹಣ್ಣಿನ ಮರಗಳನ್ನು ಬೆಳೆಸಲು ಪ್ರೇರೇಪಿಸುವ ಮೂಲಕ ಅಂತರ್ಜಲ ಮಟ್ಟವನ್ನು ವೃದ್ಧಿಸಲು ಸಂಸ್ಥೆಯು ಉಚಿತವಾಗಿ ಹಲವು ವಿಧದ ಹಣ್ಣಿನ ಗಿಡಗಳನ್ನು ವಿತರಿಸುತ್ತಿದ್ದೇವೆ’ ಎಂದು ಕಾರ್ಯಕ್ರಮ ಅಧಿಕಾರಿ ಸುಮಿತ್ರಾ ಹೇಳಿದರು.

ಶಿವಗಂಗೆಯ ಸುರೇಶ್ ಜಮೀನಿನಲ್ಲಿ ಹಲಸು, ಮಾವು, ನೇರಳೆ, ನೆಲ್ಲಿ, ಸಪೋಟ, ಸೀಬೆ, ಹುಣಸೆ, ಸೀತಾಫಲ, ನಿಂಬೆ ಹಾಗೂ ದಾಳಿಂಬೆಯಂತಹ ಹಣ್ಣಿನ ಗಿಡಗಳು ಹಾಗೂ ನುಗ್ಗೆ ಗಿಡಗಳು ದಾಸ್ತಾನು ಇದ್ದು, ಸೆಪ್ಟೆಂಬರ್‌ ತಿಂಗಳವರೆಗೆ ವಿತರಿಸಲಾಗುತ್ತದೆ. ಗುಂಡಿಗಳನ್ನು ತೋಡಿಕೊಂಡು ಹಸನು ಮಾಡಿಕೊಂಡಿರುವಂತಹ ರೈತರಿಗೆ ನೂರರಿಂದ ನೂರೈವತ್ತು ಗಿಡಗಳನ್ನು ಕೊಡಲಾಗುವುದು ಎಂದರು.

ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಲ್ಲಿನ ಆವರಣ, ಕೈತೋಟಗಳಲ್ಲಿ ಹಣ್ಣಿನ ಗಿಡಗಳನ್ನು ನೆಡಲು ಇಚ್ಛಿಸಿದರೆ ಅವರಿಗೂ ನೀಡುತ್ತೇವೆ. ರೈತರು 7338002911 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದರು.

Post Comments (+)