ಗುರುವಾರ , ಏಪ್ರಿಲ್ 15, 2021
24 °C

ಉದ್ಯಮಿಗೆ ಬೈಕ್‌ ಗುದ್ದಿ ಚಿನ್ನಾಭರಣ ದೋಚಿದ ಅಪರಿಚಿತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಬೈಕ್‌ಗೆ ತಮ್ಮ ಬೈಕ್‌ ಗುದ್ದಿಸಿದ ಇಬ್ಬರು ಅಪರಿಚಿತರು, 40 ಗ್ರಾಂ ತೂಕದ ಚಿನ್ನದ ಸರ ಮತ್ತು 10 ಗ್ರಾಂ ತೂಕದ ಉಂಗುರ ಎಗರಿಸಿ ಪರಾರಿಯಾದ ಘಟನೆ ಪಣತ್ತೂರು ರೈಲ್ವೆ ಸೇತುವೆ ಬಳಿ ನಡೆದಿದೆ. ಚಿನ್ನಾಭರಣ ಕಳೆದುಕೊಂಡ ನಂಜಾ ರೆಡ್ಡಿ ವರ್ತೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

‘ಪಣತ್ತೂರು ದಿಣ್ಣೆ ಮಾರ್ಗವಾಗಿ ಬೈಕ್‌ನಲ್ಲಿ ಮನೆಯ ಕಡೆಗೆ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಅಪರಿಚಿತರಿಬ್ಬರು ಏಕಾಏಕಿ ಡಿಕ್ಕಿ ಹೊಡೆದು ಜಗಳ ತೆಗೆದಿದ್ದರು. ಕೆಲಹೊತ್ತು ನನ್ನ ಜೊತೆ ಜಗಳ ಮಾಡಿದ ಅವರಿಬ್ಬರೂ ಬಳಿಕ ಸ್ಥಳದಿಂದ ತೆರಳಿದ್ದರು. ನಾನು ಮನೆಗೆ ತೆರಳಿ ನೋಡಿದಾಗ ಉಂಗುರ ಮತ್ತು ಕತ್ತಿನಲ್ಲಿದ್ದ ಚಿನ್ನದ ಸರ ನಾಪತ್ತೆಯಾಗಿತ್ತು. ಒಟ್ಟು ₹ 1 ಲಕ್ಷದ ಚಿನ್ನಾಭರಣವನ್ನು ಅಪರಿಚಿತರು ಕೊಂಡೊಯ್ದಿದ್ದಾರೆ’ ಎಂದು ರೆಡ್ಡಿ ದೂರಿನಲ್ಲಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.