ಲೀಲಾ ಪ್ಯಾಲೇಸ್ ಫ್ಯಾಮಿಲಿ ರೆಸ್ಟೋರೆಂಟ್

7
ಪಂಜುರ್ಲಿ ಸಮೂಹದ ಸಸ್ಯಾಹಾರ ರೆಸ್ಟೋರೆಂಟ್ 15ರಂದು ಉದ್ಘಾಟನೆ

ಲೀಲಾ ಪ್ಯಾಲೇಸ್ ಫ್ಯಾಮಿಲಿ ರೆಸ್ಟೋರೆಂಟ್

Published:
Updated:
Prajavani

ಹುಬ್ಬಳ್ಳಿ: ಪಂಜುರ್ಲಿ ಸಮೂಹದ ಶ್ರೀ ಲೀಲಾವತಿ ಪ್ಯಾಲೇಸ್‌ ಫ್ಯಾಮಿಲಿ ರೆಸ್ಟೋರೆಂಟ್ ಗೋಕುಲ ರಸ್ತೆಯ ಸಿಗ್ನೇಚರ್ ಮಾಲ್‌ನಲ್ಲಿ (ಅರ್ಬಲ್ ಒಯಸಿಸ್ ಮಾಲ್ ಎದುರು) ಇದೇ 15ರಂದು ಉದ್ಘಾಟನೆಯಾಗಲಿದೆ. ಶುದ್ಧ ಸಸ್ಯಾಹಾರಿ ಹೋಟೆಲ್ ಇದಾಗಿದ್ದು, ಚೈನೀಸ್, ಸೌತ್ ಇಂಡಿಯನ್, ನಾರ್ತ್ ಇಂಡಿಯನ್ ಆಹಾರ ಸಿಗಲಿವೆ.

‘ಪಂಜುರ್ಲಿ ಹೋಟೆಲ್‌ಗಳನ್ನು ಹುಬ್ಬಳ್ಳಿಯ ಜನರು ಮೆಚ್ಚಿಕೊಂಡಿದ್ದಾರೆ. ಇದರಿಂದ ಉತ್ತೇಜನಗೊಂಡು ಈಗ ತಾಯಿಯ ಹೆಸರಿನಲ್ಲಿ ಸಸ್ಯಾಹಾರಿ ರೆಸ್ಟೋರೆಂಟ್ ಆರಂಭಿಸಲಾಗುತ್ತಿದೆ. ಏಕಕಾಲಕ್ಕೆ 150 ಜನರು ಕುಳಿತು ಊಟ ಮಾಡಲು ವ್ಯವಸ್ಥೆ ಇದೆ. ಚಾಟ್ಸ್, ಹಣ್ಣಿನ ರಸ, ಬಗೆ ಬಗೆಯ ಸಿಹಿ ತಿಂಡಿಗಳು ಸಹ ಸಿಗಲಿವೆ. ಕುಟುಂಬ ಸಮೇತರಾಗಿ ಊಟ ಸವಿಯಲು ಬಯಸುವವರಿಗೆ ಎಲ್ಲ ರೀತಿಯ ವ್ಯವಸ್ಥೆ ಇಲ್ಲಿದೆ’ ಎಂದು ಮಾಲೀಕರಾದ ರಾಜೇಂದ್ರ ವಿ ಶೆಟ್ಟಿ ತಿಳಿಸಿದರು.

‘ಹೋಟೆಲ್ ಉದ್ಯಮದಲ್ಲಿ ಸ್ಪರ್ಧೆ ಇರುವುದರಿಂದ ಗುಣಮಟ್ಟವನ್ನು ಕಾಪಾಡಿಕೊಂಡು ಜನರಿಗೆ ಕೈಗೆಟುವ ದರದಲ್ಲಿ ಊಟೋಪಚಾರ ನೀಡುವ ಅನಿವಾರ್ಯತೆ ಇದೆ. ಈ ಹೋಟೆಲ್‌ನಲ್ಲಿಯೂ ಕೈಗೆಟುವ ದರದಲ್ಲಿ ಊಟ– ಉಪಾಹಾರ ನೀಡಲಾಗುವುದು’ ಎಂದರು.

ದೇಶ ಪ್ರೇಮ ಬಿಂಬಿಸುವ ಚಿತ್ರಗಳು: ಹೋಟೆಲ್‌ನ ಮುಖ್ಯ ದ್ವಾರವನ್ನು ಇಂಡಿಯಾಗೇಟ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹೋಟೆಲ್‌ ಒಳಗೆ ಹೋದರೆ ದೇಶ ಪ್ರೇಮವನ್ನು ಬಿಂಬಿಸುವ ಹಲವಾರು ಚಿತ್ರಗಳು ಗಮನ ಸೆಳೆಯುತ್ತವೆ. ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳೂ ಇಲ್ಲಿವೆ. ಚಿತ್ರಗಳ ಮೂಲಕ ಯೋಧರು– ರೈತರ ಮಹತ್ವವನ್ನು ಸಾರುವ ಪ್ರಯತ್ನವನ್ನೂ ಮಾಡಲಾಗಿದೆ. ರವಿಕಾಂತ್ ಎ ಸ್ ಶೆಟ್ಟಿ, ಶಶಿಕಾಂತ್ ಎಸ್ ಶೆಟ್ಟಿ, ರಾಜೇಶ್ ಎಸ್ ಶೆಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !