ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತು ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಹುಬ್ಬಳ್ಳಿ ಉಪ ಕಾರಾಗೃಹ ದೊಂಬಿ ಪ್ರಕರಣ: ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿ ಯತ್ನ
Last Updated 14 ಡಿಸೆಂಬರ್ 2018, 16:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಉಪ ಕಾರಾಗೃಹದಲ್ಲಿ ನಡೆದಿದ್ದ ದೊಂಬಿ ಪ್ರಕರಣದ ಅಪರಾಧಿಗಳಿಗೆ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ ಉರುಫ್ ಸೈಂಟಿಸ್ಟ್ ಮಂಜ್ಯನಿಗೆ 12 ವರ್ಷ, ಉಳಿದ ಆರೋಪಿಗಳಾದ ದುರ್ಗಪ್ಪ ಬಿಜವಾಡ, ರಜನಿ ಬಿಜವಾಡ, ಸುಬೋದ್ ಗಾಯಕ್‌ವಾಡ್‌, ರಾಜೇಂದ್ರ ಕಲಾಲ್, ಶಿವರಾಜ್ ಗೌರಿ, ಅತೀಶ ಕಾಂಬ್ಳೆ, ಸಲೀಂ ತಾಳಿಕೋಟೆ ಅವರಿಗೆ ಎರಡು ವರ್ಷ 9 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.

ದುರ್ಗಪ್ಪ ಬಿಜವಾಡ ಮತ್ತು ರಜನಿ ಬಿಜವಾಡ ಅವರನ್ನು ಕಲಬುರ್ಗಿ ಕಾರಾಗೃಹಕ್ಕೆ ಸ್ಥಳಾಂತರ ಮಾಡುವುದನ್ನು ವಿರೋಧಿಸಿ 2011 ಫೆಬ್ರುವರಿ 18ರಂದು ಸೈಂಟಿಸ್ಟ್ ಮಂಜ ಹಾಗೂ ಇತರರು ಗಲಾಟೆ ಮಾಡಿ ಹಲ್ಲೆ ನಡೆಸಿದ್ದರು. 27 ಮಂದಿ ಕೈದಿಗಳು ಹಾಗೂ 24 ಪೊಲೀಸ್ ಹಾಗೂ ಕಾರಾಗೃಹ ಸಿಬ್ಬಂದಿ ಗಾಯಗೊಂಡಿದ್ದರು.

ಪಬ್ಲಿಕ್ ಪ್ರಾಸಿಕ್ಯೂಟರ್ ಬಾಂದೇಕರ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ನ್ಯಾಯಾಧೀಶರಾದ ಕೆ.ಎಸ್. ಗಂಗಣ್ಣವರ ಮೇಲಿನ ಆದೇಶ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT