ಬೆಂಗಳೂರಿನ ಉದ್ಯಮಿ ಸೆರೆ

7
ತೆರಿಗೆ ವಂಚಿಸಿ ವಿದೇಶಕ್ಕೆ ಪರಾರಿ ಆಗುತ್ತಿದ್ದ ಪ್ರಕರಣ

ಬೆಂಗಳೂರಿನ ಉದ್ಯಮಿ ಸೆರೆ

Published:
Updated:

ಬೆಂಗಳೂರು: ತೆರಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗುತ್ತಿದ್ದ ನಗರದ ಉದ್ಯಮಿಯೊಬ್ಬರನ್ನು ಅದಾಯ ತೆರಿಗೆ ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2.30ಕ್ಕೆ ವಿದೇಶಕ್ಕೆ ಹೊರಟಿದ್ದ ಉದ್ಯಮಿಯನ್ನು ಸೋಮವಾರ ಬಂಧಿಸಲಾಗಿದೆ. ಆರೋಪಿಯನ್ನು ಇಂದು ತೆರಿಗೆ ವಸೂಲಾತಿ ಅಧಿಕಾರಿ ಮುಂದೆ ಹಾಜರುಪಡಿಸಲಾಯಿತು. ತೆರಿಗೆ ಕಟ್ಟುವುದಕ್ಕೆ ಸಂಬಂಧಿಸಿದಂತೆ ಅವರು ಸರಿಯಾದ ಉತ್ತರ ನೀಡದಿದ್ದರಿಂದ  ಆರು ತಿಂಗಳು ಸೆರೆವಾಸ ವಿಧಿಸಲಾಗಿದೆ.

ಉದ್ಯಮಿ ₹ 12 ಕೋಟಿ ತೆರಿಗೆ, ದಂಡ ಕಟ್ಟಬೇಕಿತ್ತು. ಇದರ ಜೊತೆಗೆ ಬಡ್ಡಿಯನ್ನೂ ಪಾವತಿಸಬೇಕಿತ್ತು. ಆದರೆ, ಯಾವುದನ್ನೂ ಪಾವತಿಸದೆ ತಮ್ಮ ಆಸ್ತಿ ವರ್ಗಾವಣೆ ಮಾಡಿ ವಿದೇಶಕ್ಕೆ ಹೊರಟಿದ್ದರು ಎಂದು ತೆರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ. ತೆರಿಗೆ ಬಾಕಿ ಪಾವತಿಸದೆ ಆಸ್ತಿ ವರ್ಗಾವಣೆ ಮಾಡುವುದು ಆದಾಯ ತೆರಿಗೆ ಕಾಯ್ದೆಗೆ ವಿರುದ್ಧವಾದ ಕ್ರಮ. ಈ ಕಾರಣಕ್ಕೆ ಉದ್ಯಮಿಯನ್ನು ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !