ಬುಧವಾರ, ಸೆಪ್ಟೆಂಬರ್ 22, 2021
21 °C

ಆನ್‌ಲೈನ್‌ ಸಲಹೆಗೆ ಮಾನ್ಯತೆ ಇಲ್ಲ: ಕೆಎಂಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆನ್‌ಲೈನ್‌ ಮೂಲಕ ವೈದ್ಯರು  ರೋಗಿಗಳಿಗೆ ಸಲಹೆ ನೀಡುವುದು ನಿಯಮಾವಳಿಗೆ ವಿರುದ್ಧ ಮತ್ತು ಇದಕ್ಕೆ ಮಾನ್ಯತೆ ಇಲ್ಲ ಎಂದು ಕರ್ನಾಟಕ ವೈದ್ಯಕೀಯ ಮಂಡಳಿ ಸ್ಪಷ್ಟಪಡಿಸಿದೆ.

ವೈದ್ಯ ಖುದ್ದು ಹಾಜರಿದ್ದು ರೋಗಿಯನ್ನು ಪರೀಕ್ಷಿಸಬೇಕು. ಇದರಿಂದ ನಿಖರವಾಗಿ ಸಮಸ್ಯೆಯನ್ನು ಅರಿತುಕೊಳ್ಳಲು ಸಾಧ್ಯ. ಆನ್‌ಲೈನ್‌ ಮೂಲಕ ಸಲಹೆ ನೀಡುವುದರಿಂದ ಹಲವು ಸಮಸ್ಯೆಗಳು ಉದ್ಭವವಾಗುತ್ತದೆ. ರೋಗಿಯ ಜೀವದ ಜತೆ ಆಟವಾಡಿದಂತಾಗುತ್ತದೆ ಎಂದು ಮಂಡಳಿ ಅಧ್ಯಕ್ಷ ಡಾ.ಎಚ್‌. ವೀರಭದ್ರಪ್ಪ ತಿಳಿಸಿದ್ದಾರೆ.

ಈಗ ತಂತ್ರಜ್ಞಾನ ಮುಂದುವರಿದಿರಬಹುದು. ಆದರೆ, ರೋಗಿಗೆ ಚಿಕಿತ್ಸೆ ನೀಡಲು ತಂತ್ರಜ್ಞಾನವೊಂದೇ ಸಾಕಾಗುವುದಿಲ್ಲ. ಆದ್ದರಿಂದ ಅದಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ವೈದ್ಯಕೀಯ ನಿಯಮಾವಳಿಗೆ ಅನುಸಾರವಾಗಿಯೇ ವೈದ್ಯಕೀಯ ವೃತ್ತಿ ಮುನ್ನಡೆಯುತ್ತದೆ ಎಂದಿದ್ದಾರೆ.

ವೈದ್ಯಕೀಯ ನಿಯಮಾವಳಿ ಉಲ್ಲಂಘಿಸಿ ಆನ್‌ಲೈನ್‌ ಚಿಕಿತ್ಸಾ ಸಲಹೆಗೆ ಅವಕಾಶ ನೀಡಿದರೆ ವೈದ್ಯರು, ಆಸ್ಪತ್ರೆಗಳು ಮತ್ತು ಕಂಪನಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು