ಗುರುವಾರ , ನವೆಂಬರ್ 26, 2020
20 °C
6ನೇ ವೇತನ ಆಯೋಗದ ಶಿಫಾರಸಿನಂತೆ ನೀಡಿ

ಸಿಎಂ ಭೇಟಿ ಮಾಡಿದ ಕಿಮ್ಸ್‌ ನೌಕರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಮನಾಗಿ ವೇತನ (ಆರನೇ ವೇತನ ಆಯೋಗದ ಶಿಫಾರಸಿನಂತೆ) ನೀಡಬೇಕು ಎಂಬ ವಿಚಾರವಾಗಿ ರಾಜ್ಯ ಒಕ್ಕಲಿಗರ ಸಂಘದ ನೌಕರರ ಒಕ್ಕೂಟದ ಸದಸ್ಯರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಗುರುವಾರ ಭೇಟಿ ಮಾಡಿ, ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.

ನೌಕರರ ಒಕ್ಕೂಟದ ಮನವಿ ಆಲಿಸಿದ ಮುಖ್ಯಮಂತ್ರಿಗಳು, ‘ರಾಜ್ಯ ಒಕ್ಕಲಿಗರ ಸಂಘದ ಆಡಳಿತಾಧಿಕಾರಿ ಜತೆಗೆ
ಮಾತುಕತೆ ನಡೆಸಿ, ಆರನೇ ವೇತನ ಶ್ರೇಣಿ ಬಿಡುಗಡೆ ವಿಚಾರವಾಗಿ ನಿರ್ದೇಶನ ನೀಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಸಾವಿರಕ್ಕೂ ಅಧಿಕ ನೌಕರರು ಕೆಲಸ ಬಹಿಷ್ಕರಿಸಿ, ಪ್ರತಿಭಟನೆ ಮುಂದುವರಿಸಿದರು. ಸೇವೆಗೆ ಹಾಜರಾಗುವಂತೆ ಪ್ರತಿಭಟನಾಕಾರರಿಗೆ ಸಂಘದ ಕಾರ್ಯನಿರ್ವಹಣಾ ಅಧಿಕಾರಿ ಸೂಚಿಸಿದ್ದು, ವೇತನ ಕಡಿತ ಮಾಡುವುವಾಗಿ ಎಚ್ಚರಿಕೆ ನೀಡಿದ್ದಾರೆ. 

‘ಸಂಘವು ನಷ್ಟದಲ್ಲಿದೆ ಎಂಬ ಕಾರಣಕ್ಕೆ 2018ರ ಏಪ್ರಿಲ್‍ನಿಂದ ಜಾರಿಗೆ ಬರಬೇಕಾದ 6ನೇ ವೇತನ ಶ್ರೇಣಿಯನ್ನು 2019ರ ಏಪ್ರಿಲ್‍ನಿಂದ ಜಾರಿಗೊಳಿಸುವಂತೆ ಬೇಡಿಕೆ ಇಟ್ಟಿದ್ದೇವೆ. ಆದರೆ, 2020ರ ಜನವರಿಯಿಂದ ಜಾರಿಗೊಳಿಸುವುದಾಗಿ ಆಡಳಿತಾಧಿಕಾರಿ ಹೇಳುತ್ತಿದ್ದಾರೆ. 6ನೇ ವೇತನ ಶ್ರೇಣಿ ಜಾರಿಯಾಗದಿದ್ದಲ್ಲಿ ಎಚ್.ಡಿ. ದೇವೇಗೌಡರ ನಿವಾಸದ ವರೆಗೆ ಪ್ರತಿಭಟನೆ ನಡೆಸಲಾಗುವುದು ’ ಎಂದು ಒಕ್ಕೂಟದ ಕಾರ್ಯದರ್ಶಿ ಆರ್. ರಂಗರಾಜು ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು