ಶನಿವಾರ, ಡಿಸೆಂಬರ್ 7, 2019
25 °C

ಸರ್ವರನ್ನೂ ಸಮಾನವಾಗಿ ಕಂಡ ಕುವೆಂಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸರ್ವ ಜನರನ್ನು ಸಮಾನವಾಗಿ ಕಂಡ ಮೇರು ಸಾಹಿತಿ ಕುವೆಂಪು ಎಂದು ಸಾಹಿತಿ ಡಾ.ಬೈರಮಂಗಲ ರಾಮೇಗೌಡ ಹೇಳಿದರು.

ರಾಜರಾಜೇಶ್ವರಿ ನಗರದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜರಾಜೇಶ್ವರಿ ನಗರ ಕ್ಷೇತ್ರ, ರಂಗ ಸಮುದ್ರ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಸವಿನೆನಪು–2018, ರಂಗಸಮುದ್ರ ಬೆಳ್ಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಕನ್ನಡ ರಾಜರಾಜೇಶ್ವರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೀರ್ತಿನಾಥ ಕುರ್ತಕೋಟಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿರು.

ಕುವೆಂಪು ಪ್ರಶಸ್ತಿ ಸ್ವೀಕರಿಸಿ ವಿಮರ್ಶಕ ಶೂದ್ರ ಶ್ರೀನಿವಾಸ್ ಮಾತನಾಡಿದರು. ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ರಾಜ್‍ಕುಮಾರ್ ಗಣ್ಯ
ರನ್ನು ಸನ್ಮಾನಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕವಿ ಡಾ.ಸಿದ್ದಲಿಂಗಯ್ಯ, ಕುವೆಂಪು ಅವರನ್ನು ನಿರಂತರ ನೆನಪು ಮಾಡಿಕೊಂಡು ಅವರ ಹಾದಿಯಲ್ಲಿ ನಡೆಯಬೇಕು’ ಎಂದು ಹೇಳಿದರು.

ಹಿರಿಯ ಸಂಶೋಧಕ ಡಾ.ಆರ್.ಶಿವಣ್ಣ ಅವರಿಗೆ ಜಿ.ಎಸ್.ಶಿವರುದ್ರಪ್ಪ ಪ್ರಶಸ್ತಿ, ವೈದ್ಯ ಸಿ.ಎಸ್. ಹನುಮಂತಪ್ಪ ಅವರಿಗೆ ಡಾ.ಎಚ್.ನರಸಿಂಹಯ್ಯ ಪ್ರಶಸ್ತಿ, ಡಾ.ಮಮತಾ.ಜಿ. ಸಾಗರ್ ಅವರಿಗೆ ಸಂಚಿ ಹೊನ್ನಮ್ಮ ಕಾವ್ಯ ಪ್ರಶಸ್ತಿ, ಡಾ.ಶಿವರಾಜ್‍ ಬ್ಯಾಡರಹಳ್ಳಿ ಅವರಿಗೆ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಪ್ರಶಸ್ತಿ, ಪ್ರೊ.ನಾರಾಯಣಘಟ್ಟ ಅವರಿಗೆ ವಿ.ಕೃ.ಗೋಕಾಕ್ ಪ್ರಶಸ್ತಿ, ಡಾ.ಶ್ರೀಪಾದ ಹೆಗಡೆ ಅವರಿಗೆ ಶಿವರಾಮ ಕಾರಂತ ಪ್ರಶಸ್ತಿ, ಕವಿಗಳಾದ ಮುದಲ್ ವಿಜಯ್, ಪ್ರೊ. ತಮ್ಮಣ್ಣಗೌಡ, ಬಸವಾನಂದ ಪ್ರಕಾಶ್, ಗೋಪಾಲಕೃಷ್ಣ ಹೆಗಡೆ, ಎಂ.ಎನ್.ಲಕ್ಷ್ಮಿದೇವಮ್ಮ, ವಿದುಷಿ ಬೃಂದಾಮದುಸೂಧನ್, ಡಾ.ಪೂರ್ಣಿಮಾದೇವಿ, ಡಾ.ಆನಂದತೀರ್ಥ.ಬಿ.ಗುಂಡಿ, ಡಾ.ಸುನೀತಾ ವಿಶ್ವಕರ್ಮ, ಡಾ.ಎ.ಎಂ.ಶಿವಕುಮಾರ್, ವೀಣಾ ಶೇಷಾದ್ರಿ ಅವರಿಗೆ ರಾಜ್ಯಮಟ್ಟದ ರಾಜರಾಜೇಶ್ವರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಿಕ್ಷಣ ತಜ್ಞ ಡಾ.ರಾಣಾಪ್ರತಾಪ್‍ರೆಡ್ಡಿ, ಎಸ್.ಪಾಲಾಕ್ಷ, ಸಮಾಜ ಸೇವಕ ವಿ.ಸಿ.ಚಂದ್ರೂ, ಪ್ರಕಾಶ್‍ನಾಯ್ಕ್, ಎನ್.ನಾಗೇಶ್ ವಿಮರ್ಶಕರಾದ ಉದಂತ ಶಿವಕುಮಾರ್ ಮಾತನಾಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು