ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತಿನಲ್ಲಿ ಅಪರಾಧ ಕೃತ್ಯ ಆರೋಪಿಗಳು ಬಲೆಗೆ

Last Updated 16 ಜುಲೈ 2019, 19:19 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋರೆಕ್ಸ್’ ಎಂಬ ಔಷಧ ಸೇವಿಸಿ, ಅದರ ಮತ್ತಿನಲ್ಲಿ ಅಪರಾಧ ಕೃತ್ಯ ಎಸಗುತ್ತಿದ್ದ ಆರೋಪಿ ಸಹಿತ ಮೂವರು ಸುಲಿಗೆಕೋರರನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.

ಶಿವಾಜಿನಗರ ನಿವಾಸಿಗಳಾದ, ಮಾದಕ ಔಷಧ ವ್ಯಸನಿ ಖುರಂ ಪಾಷಾ ಅಲಿಯಾಸ್ ಕೋರೆಕ್ಸ್ (24), ಮೊಹಮ್ಮದ್ ಅಬ್ರಹಾರ್ (19) ಮತ್ತು ಮೊಹಮ್ಮದ್ ಸಬೀಲ್ (21) ಬಂಧಿತರು. ಆರೋಪಿಗಳಿಂದ ₹ 500 ನಗದು, ಒಂದು ಪರ್ಸ್ ಮತ್ತು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಖುರಂಪಾಷಾ ಎಲೆಕ್ಟ್ರೀಷಿಯನ್‌ ಕೆಲಸ ಮಾಡುತ್ತಿದ್ದರೆ, ಅಬ್ರಹಾರ್ ಮತ್ತು ಸಬೀಲ್ ಗುಜರಿ ಅಂಗಡಿಯಲ್ಲಿ ದುಡಿಯುತ್ತಿದ್ದರು. ಮೂವರೂ ಒಂದಾಗಿ ರಾತ್ರಿ ವೇಳೆಯಲ್ಲಿ ಒಂಟಿಯಾಗಿ ಓಡಾಡುವವರನ್ನು ಅಡ್ಡಗಟ್ಟಿ ‌ನಗದು, ವಾಹನ ದೋಚಿ ಪರಾರಿಯಾಗುತ್ತಿದ್ದರು.

ಖುರಂಪಾಷಾ ವಿರುದ್ಧ ಶಿವಾಜಿನಗರ, ರಾಮಮೂರ್ತಿನಗರ, ಹಲಸೂರು ಸೇರಿ ಕೆಲವು ಪೊಲೀಸ್ ಠಾಣೆಗಳಲ್ಲಿ ಸುಲಿಗೆ ಮತ್ತು ದರೋಡೆ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಜೈಲು ಸೇರಿದ್ದ ಈತ, ಜನವರಿಯಲ್ಲಿ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದರು. ಜೈಲಿನಿಂದ ಹೊರಬಂದ ಬಳಿಕ ಖುರಂಪಾಷಾ, ಪರಿಚಿತರಾದ ಅಬ್ರಹಾರ್ ಮತ್ತು ಸಬೀಲ್‍ಗೆ ಹಣದ ಆಮಿಷ ಒಡ್ಡಿ ತನ್ನ ಕೃತ್ಯಕ್ಕೆ ನೆರವಾಗುವಂತೆ ಮನವೊಲಿಸಿದ್ದ. ಬಳಿಕ ಈ ಮೂವರೂ ಸೇರಿ, ರಾತ್ರಿ ವೇಳೆ ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು.

ಹೋಟೆಲ್ ವ್ಯಾಪಾರ ಮುಗಿಸಿದ್ವಿಚಕ್ರ ವಾಹನದಲ್ಲಿ ಸಹೋದರನ ಜತೆ ಮನೆಗೆ ಮರಳುತ್ತಿದ್ದ ಗೆದ್ದಲಹಳ್ಳಿ ನಿವಾಸಿ ಸಂಜಯ್ ಶೆಟ್ಟಿ (21) ಎಂಬವರನ್ನು ಆರೋಪಿಗಳು ಜುಲೈ 7ರಂದು ರಾತ್ರಿ 9 ಗಂಟೆ ಸುಮಾರಿಗೆ ಗಂಗಮ್ಮನ ಸರ್ಕಲ್ ಬಳಿ ಅಡ್ಡಗಟ್ಟಿ ಸುಲಿಗೆ ಮಾಡಿದ್ದರು. ಸಂಜಯ್‌ ಅವರ ವಾಹನಕ್ಕೆ ತಮ್ಮ ವಾಹನದಿಂದ ಡಿಕ್ಕಿ ಹೊಡೆದಿದ್ದ ಆರೋಪಿಗಳು, ಬಳಿಕ ಮಾರಕಾಸ್ತ್ರ ತೋರಿಸಿ ಪರ್ಸ್ ಕಸಿದುಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT