ಸ್ನೇಹಿತೆಯ ಪ್ರಜ್ಞೆ ತಪ್ಪಿಸಿ ಮಗು ಅಪಹರಿಸಿದ್ದ

ಭಾನುವಾರ, ಜೂನ್ 16, 2019
29 °C
ಕಾಮಾಕ್ಷಿಪಾಳ್ಯ ಪೊಲೀಸರಿಂದ ಆರೋಪಿ ಬಂಧನ

ಸ್ನೇಹಿತೆಯ ಪ್ರಜ್ಞೆ ತಪ್ಪಿಸಿ ಮಗು ಅಪಹರಿಸಿದ್ದ

Published:
Updated:

ಬೆಂಗಳೂರು: ಸ್ನೇಹಿತೆಯ ಪ್ರಜ್ಞೆ ತಪ್ಪಿಸಿ ಅವರ 11 ತಿಂಗಳ ಮಗುವನ್ನು ಅಪಹರಿಸಿದ್ದ ಆರೋಪದಡಿ ಜಾನ್ (35) ಎಂಬಾತನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

‘ರಾಮಮೂರ್ತಿನಗರದ ಜಾನ್, ಸುಂಕದಕಟ್ಟೆ ನಿವಾಸಿ ಕುಮಾರ್ ದಂಪತಿಯ ಮಗುವನ್ನು ಅಪಹರಿಸಿದ್ದ. ಆ ಸಂಬಂಧ ದಾಖಲಾಗಿದ್ದ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದ್ದು, ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸರು ಹೇಳಿದರು.

ಎರಡು ವರ್ಷಗಳಿಂದ ಸ್ನೇಹಿತ: ‘ನಗರದ ಕಂಪನಿಯೊಂದರಲ್ಲಿ ಮೇಲ್ವಿಚಾರಕರಾಗಿ ಕುಮಾರ್ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿಗೂ ಆರೋಪಿ ಜಾನ್‌ಗೂ ಎರಡು ವರ್ಷಗಳ ಹಿಂದೆ ಪರಿಚಯವಾಗಿತ್ತು. ಆಗಾಗ ಮನೆಗೂ ಬಂದು ಹೋಗುತ್ತಿದ್ದ.  ಅವರಿಬ್ಬರ ನಡುವೆ ಸಲುಗೆಯೂ ಬೆಳೆದಿತ್ತು’ ಎಂದು ವಿವರಿಸಿದರು.

‘ಮೇ 24ರಂದು ಬೆಳಿಗ್ಗೆ ಮನೆಗೆ ಹೋಗಿದ್ದ ಜಾನ್, ‘ನೀನು ದಪ್ಪ ಇದ್ದಿಯಾ, ತೆಳ್ಳಗೆ ಆಗಲು ಔಷಧಿ ತಂದಿದ್ದೇನೆ’ ಎಂದು ಹೇಳಿ ಕುಮಾರ್ ಅವರ ಪತ್ನಿಗೆ ಕುಡಿಸಿದ್ದ. ಕೆಲವೇ ನಿಮಿಷಗಳಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಮಗುವನ್ನು ಎತ್ತಿಕೊಂಡು ಆರೋಪಿ ಪರಾರಿಯಾಗಿದ್ದ.’

‘ಕೆಲಸ ಮುಗಿಸಿ ಕುಮಾರ್ ಸಂಜೆ ಮನೆಗೆ ಬಂದಾಗ ಮಗು ಇರಲಿಲ್ಲ. ಪ್ರಜ್ಞೆ ತಪ್ಪಿ ಬಿದ್ದಿದ್ದ ಪತ್ನಿಯನ್ನು ಎಚ್ಚರಿಸಿ ಕೇಳಿದಾಗ, ‘ಮನೆಗೆ ಬಂದಿದ್ದ ಜಾನ್, ಮತ್ತು ಬರುವ ಔಷಧಿ ಕುಡಿಸಿ ಪ್ರಜ್ಞೆ ತಪ್ಪಿಸಿ ಮಗುವನ್ನು ಅಪಹರಿಸಿಕೊಂಡು ಹೋಗಿದ್ದಾನೆ’ ಎಂದು ಹೇಳಿದ್ದರು. ಗಾಬರಿಗೊಂಡ ಕುಮಾರ್, ಠಾಣೆಗೆ ಬಂದು ದೂರು ಕೊಟ್ಟಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಆರೋಪಿಯು ರಾಮಮೂರ್ತಿನಗರದಲ್ಲಿ ಇರುವ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಹೋಗಿ ಮಗುವನ್ನು ರಕ್ಷಿಸಿ, ಆತನನ್ನು ಬಂಧಿಸಲಾಯಿತು’ ಎಂದು ಹೇಳಿದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !