ಜಾಗೃತಿ ಅಭಿಯಾನ: ವಿದ್ಯಾರ್ಥಿಗಳೊಂದಿಗೆ ಸಂವಹನ

ಗುರುವಾರ , ಏಪ್ರಿಲ್ 25, 2019
32 °C

ಜಾಗೃತಿ ಅಭಿಯಾನ: ವಿದ್ಯಾರ್ಥಿಗಳೊಂದಿಗೆ ಸಂವಹನ

Published:
Updated:
Prajavani

ಬೆಂಗಳೂರು: ‘ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ’ ಎಂದು ಹೋಟೆಲ್ ಮತ್ತು ಚಿಲ್ಲರೆ ನಿರ್ವಹಣೆ ಕ್ಷೇತ್ರದ 50ಕ್ಕೂ ಅಧಿಕ ವಿದ್ಯಾರ್ಥಿಗಳು ಘಂಟಾಘೋಷವಾಗಿ ಸಾರಿದರು.

ಗ್ರಾಮ ಪಂಚಾಯಿತಿ ಹಕ್ಕೋತ್ತಾಯ ಆಂದೋಲನ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ’ ಜಾಗೃತಿ ಅಭಿಯಾನದಲ್ಲಿ ಅವರು ಪಾಲ್ಗೊಂಡಿದ್ದರು.

ಲೋಕಸಭಾ ಚುನಾವಾಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವ ಪ್ರಮುಖ ವಿಚಾರಗಳ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ತಮ್ಮ ಗ್ರಾಮ ಹಾಗೂ ನಗರಗಳಲ್ಲಿನ ಕಾಲೇಜು ಹಾಗೂ ಸಮುದಾಯಗಳಲ್ಲೂ ಜಾಗೃತಿ ಮೂಡಿಸುವಂತೆ ಸಂಘಟಕರು ಕೋರಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !