ಮೆಟ್ರೊ ಕಾಮಗಾರಿ: ಮಾರ್ಗ ಬದಲು

7

ಮೆಟ್ರೊ ಕಾಮಗಾರಿ: ಮಾರ್ಗ ಬದಲು

Published:
Updated:

ಬೆಂಗಳೂರು: ಮೆಟ್ರೊ ರೈಲು ನಿಗಮವು ರೀಚ್‌–6 ಮಾರ್ಗದ ಕಾಮಗಾರಿ ನಡೆಸುತ್ತಿರುವ ಕಾರಣ ಸಿಲ್ಕ್‌ ಬೋರ್ಡ್‌ನಿಂದ ಜೇಡಿಮರ ಸಿಗ್ನಲ್‌ಗೆ ಜಯದೇವ ಜಂಕ್ಷನ್‌ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಗುರುವಾರದಿಂದ ಬಂದ್‌ ಮಾಡಲಾಗಿದೆ.

ಸಿಲ್ಕ್‌ ಬೋರ್ಡ್‌ನಿಂದ ಬರುವ ವಾಹನಗಳು 16ನೇ ಮುಖ್ಯರಸ್ತೆಯಲ್ಲಿ ಎಡಕ್ಕೆ ತಿರುವು ಪಡೆದು, 7ನೇ ಅಡ್ಡರಸ್ತೆ ಮಾರ್ಗವಾಗಿ ಗೋಪಾಲನ್‌ ಮಾಲ್‌ ಬಳಿ ಬಂದು, ಬನ್ನೇರುಘಟ್ಟ ರಸ್ತೆ ಸೇರಬೇಕು. 

ಈ ದಾರಿಯಲ್ಲಿ ಸಾಗುವ ವಾಹನ ಸವಾರರು ಮಾರ್ಗ ಬದಲಾವಣೆಯ ಸೂಚನಾ ಫಲಕಗಳನ್ನು ಗಮನಿಸುವಂತೆ ಮೆಟ್ರೊ ನಿಗಮ ಪ್ರಕಟಣೆ ಮೂಲಕ ಮನವಿ ಮಾಡಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !