ಪತ್ನಿ ಕಣ್ಣೆದುರೇ ಪತಿ ಕೊಲೆ: ಆರೋಪಿ ಸೆರೆ

ಮಂಗಳವಾರ, ಜೂನ್ 18, 2019
24 °C

ಪತ್ನಿ ಕಣ್ಣೆದುರೇ ಪತಿ ಕೊಲೆ: ಆರೋಪಿ ಸೆರೆ

Published:
Updated:

ಬೆಂಗಳೂರು: ಪಟ್ಟೇಗಾರಪಾಳ್ಯದ ಕಟ್ಟಡವೊಂದರಲ್ಲಿ ಸ್ನೇಹಿತ ರಾಬಿನ್ (32) ಎಂಬುವರನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಶಾರೂಕ್‌ ಖಾನ್‌ ಅಲಿಯಾಸ್ ತನ್ವೀರ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂಬ ಕಾರಣಕ್ಕೆ ಪತ್ನಿಯ ಕಣ್ಣೆದುರೇ ರಾಬಿನ್‌ನನ್ನು ತನ್ವೀರ್‌ ಕೊಲೆ ಮಾಡಿದ್ದ. ಮೇ 27ರಂದು ಈ ಘಟನೆ ನಡೆದಿತ್ತು.

ಚಿಂದಿ ಆಯುವ ರಾಬಿನ್, ಮೀನಾ ಎಂಬುವರನ್ನು ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ. ತನ್ವೀರ್ ಕೂಡ ಅವರ ಜೊತೆ ಚಿಂದಿ ಆಯುವ ಕೆಲಸ ಮಾಡುತ್ತಿದ್ದ. ಸ್ವಂತ ಮನೆ ಇಲ್ಲದಿದ್ದರಿಂದ ನಿತ್ಯವೂ ಫುಟ್‌ಪಾತ್ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಎಲ್ಲರೂ ಮಲಗುತ್ತಿದ್ದರು.

ರಾಬಿನ್ ಪತ್ನಿ ಜೊತೆ ಅನೈತಿಕ‌ ಸಂಬಂಧಕ್ಕೆ ತನ್ವೀರ್ ಒತ್ತಾಯಿಸು ತ್ತಿದ್ದ. ಇದೇ ವಿಚಾರಕ್ಕೆ ರಾಬಿನ್ ಮತ್ತು ತನ್ವೀರ್ ನಡುವೆ ಜಗಳ‌ವಾಗಿತ್ತು. ಅಷ್ಟಾದರೂ ಆರೋಪಿ, ನಿತ್ಯವೂ ದಂಪತಿ ಮಲಗುತ್ತಿದ್ದ ಜಾಗಕ್ಕೆ ಬಂದು ಕಿರುಕುಳ ನೀಡುತ್ತಿದ್ದ. ಇದೇ ಸಿಟ್ಟಿನಲ್ಲಿ ಕಲ್ಲು ತೆಗೆದುಕೊಂಡು ಬಂದು ರಾಬಿನ್ ತಲೆ ಮೇಲೆ ಎತ್ತಿ‌ ಹಾಕಿ ತನ್ವೀರ್‌ ಪರಾರಿಯಾಗಿದ್ದ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿ ಆಧರಿಸಿ ವಿಜಯನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !