ಮೆಟ್ರೊ ಭಾನುವಾರ ಬೆಳಿಗ್ಗೆ 7ರಿಂದಲೇ ಆರಂಭಕ್ಕೆ ಬೇಡಿಕೆ

7

ಮೆಟ್ರೊ ಭಾನುವಾರ ಬೆಳಿಗ್ಗೆ 7ರಿಂದಲೇ ಆರಂಭಕ್ಕೆ ಬೇಡಿಕೆ

Published:
Updated:
Deccan Herald

ಬೆಂಗಳೂರು: ವಾರದಲ್ಲಿ ಆರು ದಿನಗಳಲ್ಲಿ ‘ನಮ್ಮ ಮೆಟ್ರೊ’ ಸೇವೆ ಬೆಳಿಗ್ಗೆ 5.30ಕ್ಕೆ ಆರಂಭವಾಗುತ್ತಿದ್ದರೆ, ಭಾನುವಾರ ಮಾತ್ರ ಬೆಳಿಗ್ಗೆ 8ರಿಂದ ಶುರುವಾಗುತ್ತಿದೆ. ಭಾನುವಾರವೂ ಬೆಳಿಗ್ಗೆ 5.30ಕ್ಕೆ ಮೆಟ್ರೊ ಸೇವೆ ಆರಂಭಿಸಬೇಕು ಎಂದು ಪ್ರಯಾಣಿಕರಿಂದ ಬೇಡಿಕೆ ವ್ಯಕ್ತವಾಗಿದೆ.

‘ದೂರದ ಊರುಗಳಿಂದ ನಗರಕ್ಕೆ ಬರುವವರು ಭಾನುವಾರ ಮೆಟ್ರೊಗಾಗಿ ಬೆಳಿಗ್ಗೆ 8 ಗಂಟೆವರೆಗೆ ಕಾಯಬೇಕಾಗಿದೆ. ಬೆಳಿಗ್ಗೆ 5.30ಕ್ಕೆ ಸೇವೆ ಆರಂಭವಾದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ’ ಎಂದು ರಾಜಾಜಿನಗರದ ಸಚಿನ್‌ ಅಭಿಪ್ರಾಯಪಟ್ಟರು.

ಪ್ರಯಾಣಿಕರಿಂದ ಈ ಬಗ್ಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಭಾನುವಾರದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲು ಬೆಂಗಳೂರು ಮೆಟ್ರೊ ರೈಲು ನಿಗಮವೂ ಚಿಂತನೆ ನಡೆಸಿದೆ.   

‘ಭಾನುವಾರ ಬೆಳಿಗ್ಗೆ ಮೆಟ್ರೊ ಸೇವೆಯನ್ನು ಇನ್ನಷ್ಟು ಬೇಗ ಆರಂಭಿಸುವ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸುತ್ತಿದ್ದೇವೆ. ಇದಕ್ಕಾಗಿ ಸಿಬ್ಬಂದಿಯ ಸಮಯವನ್ನೂ ಮರು ಹೊಂದಾಣಿಕೆ ಮಾಡಬೇಕಿದೆ. ಬೆಳಿಗ್ಗೆ 5.30ಕ್ಕೆ ಅಲ್ಲದಿದ್ದರೂ ಕನಿಷ್ಠ ಪಕ್ಷ ಬೆಳಿಗ್ಗೆ 7 ಗಂಟೆಗಾದರೂ ಸೇವೆ ಆರಂಭಿಸುವ ಉದ್ದೇಶ ನಮ್ಮದು’ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌.ವೈ.ಚವ್ಹಾಣ್‌  ತಿಳಿಸಿದರು.

ರೈಲುಗಳ ನಿರ್ವಹಣೆ, ಹಳಿಗಳ ತಪಾಸಣೆ, ತಾಂತ್ರಿಕ ಪರಿಶೀಲನೆ, ಸುರಕ್ಷತಾ ವ್ಯವಸ್ಥೆ ನಿರ್ವಹಣೆ, ದುರಸ್ತಿಗಾಗಿ ಸಮಯ ಬೇಕಾಗುತ್ತದೆ. ಅದಕ್ಕಾಗಿ ವಾರದಲ್ಲಿ ಒಂದು ದಿನ ರೈಲು ಸಂಚಾರವನ್ನು ವಿಳಂಬವಾಗಿ ಆರಂಭಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !