ಗುರುವಾರ , ಏಪ್ರಿಲ್ 22, 2021
28 °C

ನಿಮ್ಹಾನ್ಸ್‌ನಲ್ಲಿ ಮಾಹಿತಿ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್‌) ಹೊರ ರೋಗಿಗಳ ವಿಭಾಗದ ಕಟ್ಟಡದಲ್ಲಿ ಮಾಹಿತಿ ಕೇಂದ್ರವನ್ನು  ಆರಂಭಿಸಲಾಗಿದೆ. ವಾರದ ಎಲ್ಲ ದಿನ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 3.30ರವರೆಗೆ ಈ ಕೇಂದ್ರವು ತೆರೆದಿರುತ್ತದೆ. 

ನಿಮ್ಹಾನ್ಸ್‌ನ ಮನೋವಿಜ್ಞಾನ ಸಾಮಾಜಿಕ ಕಾರ್ಯ ವಿಭಾಗವು ನಿರ್ವಹಿಸಲಿರುವ ಈ ಮಾಹಿತಿ ಕೇಂದ್ರವನ್ನು ನಿಮ್ಹಾನ್ಸ್‌ ನಿರ್ದೇಶಕ ಡಾ. ಬಿ.ಎನ್. ಗಂಗಾಧರ ಇತ್ತೀಚೆಗೆ ಉದ್ಘಾಟಿಸಿದರು.

ಯಾವ ಮಾಹಿತಿ ಲಭ್ಯ:

* ಸರ್ಕಾರದ ಯೋಜನೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳು

* ಅಂಗವಿಕಲರ ಪ್ರಮಾಣಪತ್ರ, ನಿರ್ದಿಷ್ಟ ಗುರುತಿನ ಚೀಟಿ, ಅಂಗವಿಕಲರ ಪಿಂಚಣಿ, ಸಂಚಾರ ಭತ್ಯೆ

* ವಿಮೆ (ಆಯುಷ್ಮಾನ್‌ ಭಾರತ್‌), ವಿಮಾ ನೌಕರರ ಸೌಲಭ್ಯಗಳು, ಶೈಕ್ಷಣಿಕ ಸೌಲಭ್ಯ, ಆದಾಯ ತೆರಿಗೆ ವಿನಾಯಿತಿ, ಸಾಲ ಸೌಲಭ್ಯ

* ಕೌಶಲ ತರಬೇತಿ ಕೇಂದ್ರಗಳು, ವಸತಿ ಯೋಜನೆ, ಪಿಂಚಣಿ ವರ್ಗಾವಣೆ, ಉಚಿತ ಕಾನೂನು ಸೇವೆಗಳು ಮತ್ತು ಆಂಬುಲೆನ್ಸ್‌ ಸೇವೆಗಳು

* ಮಾನಸಿಕ ಮತ್ತು ನರವೈಜ್ಞಾನಿಕ ಸಮಸ್ಯೆಗಳನ್ನು ಹೊಂದಿರುವವರಿಗೆ ಪುನರ್ವಸತಿ ಕೇಂದ್ರಗಳ ಬಗ್ಗೆ ಮಾಹಿತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು