ಗಣೇಶ ಹಬ್ಬ ಶಾಂತಿಯಿಂದ ಆಚರಿಸಿ: ಜಗದೀಶ್ ಹಂಚನಾಳ

7

ಗಣೇಶ ಹಬ್ಬ ಶಾಂತಿಯಿಂದ ಆಚರಿಸಿ: ಜಗದೀಶ್ ಹಂಚನಾಳ

Published:
Updated:
Deccan Herald

ಹುಬ್ಬಳ್ಳಿ: ಗಣೇಶ ಚತುರ್ಥಿಯನ್ನು ಶಾಂತಿಯುತವಾಗಿ ಆಚರಿಸಿ ಎಂದು ಅಶೋಕನಗರ ಠಾಣೆ ಇನ್‌ಸ್ಪೆಕ್ಟರ್ ಜಗದೀಶ ಹಂಚನಾಳ ಹೇಳಿದರು.

ಠಾಣಾ ವ್ಯಾಪ್ತಿಯ ಶಾಂತಿ ಸಭೆಯಲ್ಲಿ ಶನಿವಾರ ಮಾನಾಡಿದ ಅವರು, ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ. ಪಿಒಪಿ ಗಣೇಶ ಮೂರ್ತಿಗಳನ್ನು ಕೂರಿಸಬೇಡಿ. ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಡಿಜೆ ಸೌಂಡ್ ಬಳಸದಿರುವುದು ಸೂಕ್ತ. ಒಂಬತ್ತನೇ ದಿನದ ಗಣೇಶ ವಿಸರ್ಜನೆ ದಿನ ಮೊಹರಂ ಹಬ್ಬ ಸಹ ಬರುತ್ತದೆ. ಶಾಂತಿ– ಸೌಹಾರ್ದತೆಯಿಂದ ಎಲ್ಲರೂ ನಡೆದುಕೊಳ್ಳಿ. ಪೊಲೀಸ್ ಇಲಾಖೆ ನೀಡಿರುವ ಎಲ್ಲ ಷರತ್ತುಗಳನ್ನು ಪಾಲಿಸಿ ಎಂದು ಅವರು ಮನವಿ ಮಾಡಿದರು.

ಮಾಧವನಗರ ಗಣೇಶ ಮಂಡಳಿಯವರು ಈ ಬಾರಿ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಡಿಜೆ ಸೌಂಡ್ ಸಹ ಬಳಸುವುದಿಲ್ಲ ಎಂದು ಮಾದರಿಯಾಗಿದ್ದಾರೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಆ ಮೊತ್ತವನ್ನು ಬಡ ಮಕ್ಕಳ ಶಿಕ್ಷಣಕ್ಕೆ ನೀಡಲು ನಿರ್ಧರಿಸುವ ಮೂಲಕ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪೊಲೀಸ್ ಕಮಿಷನರ್ ಅವರು ಸಹ ಮಂಡಳಿ ಸದಸ್ಯರನ್ನು ಅಭಿನಂದಿಸುವರು ಎಂದರು.

ಎಸ್‌ಐ ಜಿ. ದೇವಿ, ವಿವಿಧ ಸಂಘಟನೆಗಳ ಮಖಂಡರಾದ ಈಶ್ವರಗೌಡ ಪಾಟೀಲ, ಅಲ್ಲಾಬಕ್ಷ್‌ ಕೋಟ್ನಾಳ, ಸಿದ್ದು ಮೂಗುಳಿಶೆಟ್ಟರ್, ಸಮದ್ ಶೇಖ್, ಗೌಸ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !