ಸಿ.ಜೆ. ಗೊಗೊಯಿ ದೋಷಮುಕ್ತಿಗೆ ವಿರೋಧ

ಶನಿವಾರ, ಮೇ 25, 2019
22 °C

ಸಿ.ಜೆ. ಗೊಗೊಯಿ ದೋಷಮುಕ್ತಿಗೆ ವಿರೋಧ

Published:
Updated:
Prajavani

ಬೆಂಗಳೂರು: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರನ್ನು ದೋಷಮುಕ್ತಗೊಳಿಸಿರುವುದನ್ನು ಖಂಡಿಸಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಕಾನೂನು ವಿದ್ಯಾರ್ಥಿಗಳು, ವಕೀಲರು ಹಾಗೂ ಮಹಿಳಾ ಸಂಘಟನೆಗಳ 30 ಕಾರ್ಯಕರ್ತರು ಹೈಕೋರ್ಟ್‌ ಹಾಗೂ ಸಿಟಿ ಸಿವಿಲ್‌ ಕೋರ್ಟ್‌ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ‘ನೀನು ಎಷ್ಟೇ ಎತ್ತರದವನಾಗಿದ್ದರೂ, ಕಾನೂನು ನಿನಗಿಂತ ಶ್ರೇಷ್ಠ’, ‘ವಿಶೇಷ ತನಿಖಾ ಸಮಿತಿ ರಚಿಸಲು ಹಿಂದೇಟು’ ಎಂಬ ಫಲಕಗಳನ್ನು ಪ್ರದರ್ಶಿಸಿದರು.

‘ಕೋರ್ಟ್‌ ಮುಂದೆ ಪ್ರತಿಭಟನೆ ಮಾಡುವುದು ನಮಗೆ ತಿಳಿದಿರಲಿಲ್ಲ. ಪ್ರತಿಭಟನೆಗೆ ಅನುಮತಿ ಪಡೆಯದ ಕಾರಣ ಕೆಲವರನ್ನು ವಶಕ್ಕೆ ಪಡೆಯಲಾಯಿತು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ವಕೀಲ ಅತೀಫ್‌, ‘ಲೈಂಗಿಕ ಕಿರುಕುಳದ ಆರೋಪ ಮಾಡಿದವರನ್ನು ಸರಿಯಾಗಿ ನಡೆಸಿಕೊಂಡಿಲ್ಲ. ತೀರ್ಪಿನ ಪ್ರತಿಯನ್ನು ಸಹ ಆಕೆಗೆ ನೀಡಿಲ್ಲ. ಈ ವಿಷಯದಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅದಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು.

‘ಈ ಪ್ರಕರಣದಲ್ಲಿ ವಾದ ವಿವಾದಗಳು ಸರಿಯಾಗಿ ನಡೆದಿಲ್ಲ. ಸಂತ್ರಸ್ತೆಯನ್ನು ನಡೆಸಿಕೊಂಡ ರೀತಿಯೂ ಸರಿಯಲ್ಲ’ ಎಂದು ಲಿಂಗ ಸಮಾನತೆ ಪರ ಹೋರಾಟ ನಡೆಸುತ್ತಿರುವ ಗೋಪ್ಕಿಯಾ ಬಸಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !