ತಡರಾತ್ರಿ ಉಣಕಲ್ ಕ್ರಾಸ್‌ನಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ

ಗುರುವಾರ , ಏಪ್ರಿಲ್ 25, 2019
22 °C
ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಆಗ್ರಹ

ತಡರಾತ್ರಿ ಉಣಕಲ್ ಕ್ರಾಸ್‌ನಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ

Published:
Updated:
Prajavani

ಹುಬ್ಬಳ್ಳಿ: ಸಮರ್ಪಕ ಕುಡಿಯುವ ನೀರಿನ ಆಗ್ರಹಿಸಿ ಉಣಕಲ್ ಕ್ರಾಸ್ ನಿವಾಸಿಗಳು ತಡರಾತ್ರಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಬಂದ ಪೊಲೀಸರೊಂದಿಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು. ಕೊನೆಗೆ ಪ್ರತಿಭಟನೆ ಹಿಂದಕ್ಕೆ ಪಡೆದರು. ರಸ್ತೆ ಬಂದ್ ಆದ ಕಾರಣ ಸಂಚಾರಕ್ಕೆ ಅಡಚಣೆಯಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ಭಾನುವಾರ ರಾತ್ರಿ ಕೆಲವೇ ನಿಮಿಷ ಮಾತ್ರ ನೀರು ಬಂತು. ಆದ್ದರಿಂದ ದಿಢೀರ್ ಪ್ರತಿಭಟನೆ ನಡೆಸಿದೆವು ಎಂದು ಸ್ಥಳೀಯರು ತಿಳಿಸಿದರು.

‘12 ದಿನಗಳಿಗೊಮ್ಮೆ ನೀರು ಬರುತ್ತಿದೆ. ನೀರು ಬಂದಾಗಲಾದರೂ ತುಂಬಿಕೊಳ್ಳೋಣ ಎಂದರೆ ಕೆಲವೇ ನಿಮಿಷಗಳ ನಂತರ ಬಂದ್ ಮಾಡುತ್ತಾರೆ. ಮಾಜಿ ಕಾರ್ಪೋರೇಟರ್, ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನಾ ಆಗಿಲ್ಲ. ಕುಡಿಯಲು ನೀರು ಇಲ್ಲದಿದ್ದರೆ, ಜೀವನ ಸಾಗಿಸುವುದು ಹೇಗೆ’ ಎಂದು ಪೂಜಾ ವಾಡೇಕರ್ ಎಂಬುವರು ಆಕ್ರೋಶ ವ್ಯಕ್ತಪಡಿಸಿದರು.

‘ನಮ್ಮ ಪಕ್ಕದ ಬಡಾವಣೆ ಸಾಯಿನಗರದಲ್ಲಿ 24x7 ನೀರು ಬರುತ್ತದೆ. ಆದರೆ ನಮಗೆ ಮಾತ್ರ ಹದಿನೈದು ದಿನಕ್ಕೊಮ್ಮೆಯೂ ನೀರು ಪೂರೈಸುತ್ತಿಲ್ಲ. ನೀರಿನ ಬವಣೆಯಿಂದ ಬೇಸತ್ತಿದ್ದೇವೆ’ ಎಂದು ಶಕುಂತಲಾ ಎಂಬುವರು ಅಳಲು ತೋಡಿಕೊಂಡರು.

‘ಪ್ರತಿಭಟನೆ ಮಾಡುವವರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದರು. ನಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದೇ ತಪ್ಪೇ’ ಎಂದು ಅವರು ಪ್ರಶ್ನಿಸಿದರು.

ಪ್ರತಿಭಟನಾಕಾರರರು ಕೆಲವು ವಾಹನಗಳನ್ನು ತಡೆದರು. ಇದರಿಂದಾಗಿ ವಾಹನ ಸವಾರರು ಮತ್ತು ಪ್ರತಿಭಟನಾಕಾರರ ಮಧ್ಯೆ ವಾಗ್ವಾದವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !