ಪಾಲಿಕೆಯ ರಸ್ತೆ ವಿಸ್ತರಣೆ ಕಾಮಗಾರಿ ಕುಂಠಿತ

7
ಅಭಿವೃದ್ಧಿ ಹಕ್ಕುಗಳ ಹಸ್ತಾಂತರ ನೀತಿಯಲ್ಲಿನ ತೊಡಕು: ಭೂಮಿ ನೀಡಲು ಮುಂದಾಗದ ಜನ

ಪಾಲಿಕೆಯ ರಸ್ತೆ ವಿಸ್ತರಣೆ ಕಾಮಗಾರಿ ಕುಂಠಿತ

Published:
Updated:

ಬೆಂಗಳೂರು: ಅಭಿವೃದ್ಧಿ ಹಕ್ಕುಗಳ ಹಸ್ತಾಂತರ (ಟಿಡಿಆರ್‌) ನೀತಿಯಲ್ಲಿನ ತೊಡಕಿನಿಂದಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಹಲವು ರಸ್ತೆಗಳ ವಿಸ್ತರಣೆ ಕಾಮಗಾರಿಗಳನ್ನು ಮುಂದುವರಿಸುವುದು ಕಗ್ಗಂಟಾಗಿ ಪರಿಣಮಿಸಿದೆ.

ಬನ್ನೇರುಘಟ್ಟ, ವರ್ತೂರು, ಸರ್ಜಾಪುರ, ಟ್ಯಾನರಿ ಮತ್ತು ಜಯಮಹಲ್‌ ರಸ್ತೆಗಳ ವಿಸ್ತರಣೆ ಕೆಲಸಕ್ಕೆ ಭೂಮಿ ಸಿಗದಿರುವುದರಿಂದ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿವೆ.

2017ರ ಮಾರ್ಚ್‌ನಲ್ಲಿ ಟಿಡಿಆರ್‌ ಹೊಸ ನೀತಿಯನ್ನು ಅನುಷ್ಠಾಗೊಳಿಸಿದ ನಂತರ ಒಬ್ಬರೇ ಒಬ್ಬ ನಾಗರಿಕರು ಕೂಡ ಭೂಮಿ ನೀಡಲು ಮುಂದೆ ಬಂದಿಲ್ಲ ಎನ್ನುವುದು ಬಿಬಿಎಂಪಿ ಯೋಜನೆ ವಿಭಾಗದಲ್ಲಿನ ಅಧಿಕಾರಿಗಳ ವಿವರಣೆ.

ಸ್ವಾಧೀನಕ್ಕೆ ಗುರುತಿಸಿರುವ ಭೂಮಿಯ ಮಾಲೀಕರು ಟಿಡಿಆರ್‌ ಬದಲಿಗೆ ಪರಿಹಾರ ಧನವನ್ನು ಅಪೇಕ್ಷಿಸುತ್ತಿರುವುದೇ ಬಿಬಿಎಂಪಿಗೆ ಭೂಮಿ ಸಿಗದಿರುವುದಕ್ಕೆ ಮುಖ್ಯ ಕಾರಣ. ಆದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಭೂಸ್ವಾಧೀನ ನೀತಿಯನ್ನು ಪರಿಷ್ಕೃತಗೊಳಿಸಿ ಭೂಮಿ ನೀಡುವವರಿಗೆ ದುಪ್ಪಟ್ಟು ಮೌಲ್ಯದ ಟಿಡಿಆರ್‌ ನೀಡಲು ನಿರ್ಧರಿಸಿದೆ.

‘ಟಿಡಿಆರ್‌ ಪ್ರಕ್ರಿಯೆಯಿಂದ ಆಗುವ ವಿಳಂಬ ತಪ್ಪಿಸಲು ನಮ್ಮ ಹಿಂದಿನ ಅನೇಕ ಯೋಜನೆಗಳಲ್ಲಿ ಪರಿಹಾರವಾಗಿ ಹಣವನ್ನೇ ನೀಡಿದ್ದೆವು’ ಎಂದು ಬಿಬಿಎಂಪಿಯ ರಸ್ತೆ ಮೂಲಸೌಕರ್ಯ ವಿಭಾಗದ ಹಿರಿಯ ಅಧಿಕಾರಿ ತಿಳಿಸಿದರು.

‘ಅನೇಕ ವರ್ಷಗಳ ಹಿಂದೆಯೇ ಪ್ರಾರಂಭವಾಗಿರುವ ಬನ್ನೇರುಘಟ್ಟ ರಸ್ತೆಯ ವಿಸ್ತರಣೆ ಕೆಲಸ ಶೇ 25ರಷ್ಟು ಮಾತ್ರ ಆಗಿದೆ. ವರ್ತೂರು ಶೇ 10ರಷ್ಟು ಕೆಲಸವಷ್ಟೇ ನಡೆದಿದೆ. ಟ್ಯಾನರಿ ಮತ್ತು ಜಯಮಹಾಲ್ ರಸ್ತೆಗಳ ಕಾಮಗಾರಿ ಇನ್ನೂ ಪ್ರಾರಂಭ ವಾಗಿಲ್ಲ. ಟಿಡಿಆರ್‌ ನೀಡುವ ಪ್ರಕ್ರಿಯೆಯನ್ನು ಚುರುಕು ಗೊಳಿಸಬೇಕು’ ಎಂದು ರಸ್ತೆ ಅಗಲೀಕರಣ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಜೆ.ಆರ್‌.ನಂದೀಶ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !