ಬುಧವಾರ, ಏಪ್ರಿಲ್ 14, 2021
24 °C

500 ಕೆ.ಜಿ ಪ್ಲಾಸ್ಟಿಕ್ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜರಾಜೇಶ್ವರಿನಗರ: ಅನಧಿಕೃತವಾಗಿ ಪ್ಲಾಸ್ಟಿಕ್ ಕವರ್ ತಯಾರಿಸುತ್ತಿದ್ದ ಘಟಕಗಳ ಮೇಲೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಶುಕ್ರವಾರ ದಾಳಿ ನಡೆಸಿದರು.

ಕೊಟ್ಟಿಗೇಪಾಳ್ಯ ವಾರ್ಡ್‍ನ ಮಾರ್ಕಂಡೇಯನಗರ, ಶ್ರೀನಿವಾಸ ನಗರದಲ್ಲಿ ವಿಶ್ವಾಸ್ ಮತ್ತು ಚಂದ್ರಶೇಖರ ಅಯ್ಯರ್ ಎಂಬುವವರು ಅನಧಿಕೃತವಾಗಿ ನಡೆಸುತ್ತಿದ್ದ ಘಟಕದ ಮೇಲೆ ಆರೋಗ್ಯಾಧಿಕಾರಿ ಡಾ.ಕೋಮಲ ನೇತೃತ್ವದಲ್ಲಿ  ಆರೋಗ್ಯ ಪರಿವೀಕ್ಷಕರಾದ ಕೆ.ಶಿವಲಿಂಗಯ್ಯ, ನಂಜುಂಡಯ್ಯ, ಡಿ.ಎಲ್.ನಾರಾಯಣ್ ದಾಳಿ ನಡೆಸಿ 500 ಕೆಜಿ ಪ್ಲಾಸ್ಟಿಕ್ ಕವರ್ ವಶಪಡಿಸಿಕೊಂಡರು.

ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ₹ 30 ಸಾವಿರ ದಂಡ ವಿಧಿಸಿದರು. ಅಲ್ಲದೇ ಘಟಕಕ್ಕೆ ಬೀಗ ಹಾಕಿದರು.

ಹೋಟೆಲ್, ಮಾಲ್, ತರಕಾರಿ ಅಂಗಡಿ, ದಿನಸಿ ಅಂಗಡಿ, ತಳ್ಳುವಗಾಡಿ, ಬಟ್ಟೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಬ್ಯಾಗ್ ಕಂಡುಬಂದರೆ ಅಂಗಡಿ ಮುಚ್ಚಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು