ಬುಧವಾರ, ಅಕ್ಟೋಬರ್ 23, 2019
25 °C

ಲಿಟ್ಟಲ್‌ ದೊಡ್ಡ ಸರಣಿ ಹಂತಕ: ಎಫ್‌ಬಿಐ

Published:
Updated:
Prajavani

ವಾಷಿಂಗ್ಟನ್‌: ಕೊಲೆ ಅಪರಾಧಿ ಸ್ಯಾಮುಯೆಲ್‌ ಲಿಟ್ಟಲ್‌ (79) ಕುರಿತು ಹಲವು ವರ್ಷಗಳ ತನಿಖೆಯ ನಂತರ ಈತ ಅಮೆರಿಕದ ಇತಿಹಾಸದಲ್ಲಿಯೇ ಅತಿ ದೊಡ್ಡ ಸರಣಿ ಹಂತಕ ಎಂದು ಭಾನುವಾರ ಫೆಡರಲ್‌ ತನಿಖಾ ಸಂಸ್ಥೆ (ಎಫ್‌ಬಿಐ) ಘೋಷಿಸಿದೆ.  

‘93 ಸರಣಿ ಕೊಲೆಗಳನ್ನು ಮಾಡಿರುವುದಾಗಿ ಲಿಟ್ಟಲ್‌ ಒಪ್ಪಿಕೊಂಡಿದ್ದಾನೆ. ಆತ ನೀಡಿರುವ ಎಲ್ಲ ಮಾಹಿತಿಗಳೂ ನಂಬಲರ್ಹವಾಗಿವೆ. ಈಗಾಗಲೇ 50 ಪ್ರಕರಣಗಳನ್ನು ಭೇದಿಸಲಾಗಿದೆ. ಲಿಟ್ಟಲ್‌ಗೆ ವಯಸ್ಸಾಗಿದ್ದು, ಆರೋಗ್ಯವೂ ಹದಗೆಟ್ಟಿರುವುದರಿಂದ ಉಳಿದ ಪ್ರಕರಣಗಳ ತನಿಖೆಯನ್ನು ತ್ವರಿತವಾಗಿ ನಡೆಸುವುದು ಅಗತ್ಯವಾಗಿದೆ. ತಾನೇ ಕೊಲೆ ಮಾಡಿರುವ ಐವರು ಮಹಿಳೆಯರ ಚಿತ್ರವನ್ನು ಲಿಟ್ಟಲ್‌ ಬಿಡಿಸಿದ್ದು, ಇವುಗಳ ಸಹಾಯದಿಂದ ಪ್ರಕರಣವನ್ನು ಪತ್ತೆ ಹಚ್ಚಲು ಸಾರ್ವಜನಿಕರ ಸಹಾಯವನ್ನು ಕೋರಲಾಗಿದೆ’ ಎಂದು ತಿಳಿಸಿದೆ. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)