ನಾಳೆಯಿಂದ ಸಿದ್ಧಾರೂಢ ಸ್ವಾಮಿಗಳ ಪುಣ್ಯಾರಾಧನೆ: 27ರಂದು ಜಲರಥೋತ್ಸವ

7
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ವಾಮಿಗಳ ಅಧ್ಯಯನ ಪೀಠ ಆರಂಭಕ್ಕೆ ಮನವಿ

ನಾಳೆಯಿಂದ ಸಿದ್ಧಾರೂಢ ಸ್ವಾಮಿಗಳ ಪುಣ್ಯಾರಾಧನೆ: 27ರಂದು ಜಲರಥೋತ್ಸವ

Published:
Updated:

ಹುಬ್ಬಳ್ಳಿ: ಸಿದ್ಧಾರೂಢ ಸ್ವಾಮಿಗಳ 89ನೇ ಪುಣ್ಯಾರಾಧನೆ ಅಂಗವಾಗಿ ಇಂದಿನಿಂದ 27ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಿ.ಡಿ. ಮಾಳಗಿ ಹೇಳಿದರು.

ಮೊದಲ ದಿನ ಬೆಳಿಗ್ಗೆ ಸ್ವಾಮಿಯವರ ಸಮಾಧಿಗೆ ರುದ್ರಾಭಿಷೇಕ ಮಾಡುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಪ್ರತಿ ನಿತ್ಯ ಬೆಳಿಗ್ಗೆ 7.45ಕ್ಕೆ ಸ್ವಾಮಿಯವರ ಪುರಾಣ ಮಠಣ ಹಾಗೂ 9.30ಕ್ಕೆ ಶಾಸ್ತ್ರ ಪ್ರವಚನ ನಡೆಯಲಿದೆ. ಸಂಜೆ 5 ಗಂಟೆಗೆ ಕೀರ್ತನೆ ಹಾಗೂ ಮಹಾಪೂಜೆ ನೆರವೇರಲಿದೆ. 27ರಂದು ಪುಣ್ಯತಿಥಿಯ ದಿವಸ ಪಲ್ಲಕ್ಕಿ ಉತ್ಸವ ವಾದ್ಯವೈಭವದೊಂದಿಗೆ ನಡೆಯಲಿದೆ. ನಗರದ ಪ್ರಮುಖ ಬೀದಿಗಳಲ್ಲಿ ಜಲರಥೋತ್ಸವ ಸಾಗಲಿದ್ದು, ಸುಮಾರು ಒಂದೂವರೆ ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಥೋತ್ಸವಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಪಾರ ಸಂಖ್ಯೆಯಲ್ಲಿ ಬರುವ ಭಕ್ತರ ವಾಹನ ನಿಲುಗಡೆಗೆ ಸಹ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ರಥೋತ್ಸವದಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಅಧ್ಯಯನ ಪೀಠಕ್ಕೆ ಮನವಿ: ಸಿದ್ಧಾರೂಢರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಸಲು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ಈ ಕುರಿತು ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗಿದೆ. ಅವರ ವಿಚಾರಗಳು ಮೇಲೆ ಇನ್ನಷ್ಟು ಬೆಳಕು ಚೆಲ್ಲಬೇಕು, ಅವರ ಸಿದ್ಧಾಂತ ಉಳಿಯಬೇಕು ಎಂದು ಮಾಳಗಿ ಹೇಳಿದರು.

ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಹ ಜಾರಿ ಮಾಡಲು ಯೋಜನೆ ತಯಾರಿಸಲಾಗುತ್ತಿದೆ. ಅಡುಗೆ ಮನೆಗೆ ಸೋಲಾರ್ ಅಳವಡಿಸಲು, ದೀಪಗಳು, ಫ್ಯಾನ್‌ಗಳನ್ನು ಸೋಲಾರ್ ಶಕ್ತಿಯಿಂದಲೇ ನಡೆಸುವ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ಹೊಂಡವನ್ನು ಜೀರ್ಣೋದ್ಧಾರ ಮಾಡಿ, ಅಲ್ಲಿ ಸಂಗೀತ ಕಾರಂಜಿ ಅಳವಡಿಸಲಾಗುವುದು ಎಂದು ಅವರು ಹೇಳಿದರು. ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ನೆರವು ನೀಡುವ ಬಗ್ಗೆಯೂ ಸಮಿತಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !