ಮಂಗಳವಾರ, ಅಕ್ಟೋಬರ್ 20, 2020
22 °C
ಯುವತಿಯಿಂದ ಕಿರುಕುಳ ಆರೋಪ

ಮದುವೆ ದಿನವೇ ಟೆಕಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮದುವೆ ನಡೆಯಬೇಕಿದ್ದ ದಿನವೇ ಡಾಮಿನಿಕ್ ರೊಜಾರಿಯಾ (24) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ವಸಂತನಗರದ ನಿವಾಸಿ ಡಾಮಿನಿಕ್‌, ನಗರದ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್. ತಮ್ಮ ಮನೆಯಲ್ಲೇ ಶನಿವಾರ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ಹೈಗ್ರೌಂಡ್ಸ್ ಠಾಣೆ ಪೊಲೀಸರು ಹೇಳಿದರು.

ಸಾವಿನ ಬಗ್ಗೆ ದೂರು ನೀಡಿರುವ ಡಾಮಿನಿಕ್ ಅವರ ತಂದೆ ಡೇವಿಡ್, ‘ಮಗನ ಸಾವಿಗೆ ಆತ ಮದುವೆಯಾಗಬೇಕಿದ್ದ ಯುವತಿಯ ಕಿರುಕುಳವೇ ಕಾರಣ. ಆಕೆಯ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಆಗ್ರಹಿಸಿದ್ದಾರೆ.

‘ಮಗನಿಗೂ ಯುವತಿಗೂ ಹಲವು ವರ್ಷಗಳಿಂದ ಪರಿಚಯವಿತ್ತು. ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ಯುವತಿ, ಠಾಣೆಗೂ ದೂರು ನೀಡಿದ್ದಳು. ಎರಡು ವರ್ಷ ಬಿಟ್ಟು ಮದುವೆಯಾಗುವುದಾಗಿ ಡಾಮಿನಿಕ್ ಹೇಳಿದ್ದ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.  

‘ಇತ್ತೀಚೆಗೆ ಪುನಃ ದೂರು ನೀಡಿದ್ದ ಯುವತಿ, ಮದುವೆಯಾಗುವಂತೆ ಪಟ್ಟು ಹಿಡಿದಿದ್ದಳು. ಹೀಗಾಗಿ, ಮಗನಿಗೂ ಆಕೆಗೂ ಶನಿವಾರ ಮಧ್ಯಾಹ್ನ 3 ಗಂಟೆಗೆ ನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ಮಾಡಲು ತೀರ್ಮಾನಿಸಿದ್ದೆವು. ಅದಕ್ಕೆ ಒಪ್ಪಿ ಮನೆಗೆ ಬಂದಿದ್ದ ಮಗ, ನಾನು ಹಾಗೂ ಪತ್ನಿ ಕೆಲಸಕ್ಕೆ ಹೋದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.