ಬಡತನದಲ್ಲೂ ಅರಳಿದ ಕುಸುಮ

ಸೋಮವಾರ, ಮೇ 20, 2019
30 °C

ಬಡತನದಲ್ಲೂ ಅರಳಿದ ಕುಸುಮ

Published:
Updated:
Prajavani

ನೆಲಮಂಗಲ: ಮನೆಯಲ್ಲಿ ಬಡತನ, ಹೇಳಿಕೊಳ್ಳುವಂತಹ ಅನುಕೂಲಗಳಿಲ್ಲದಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 611 ಅಂಕ ಗಳಿಸುವ ಮೂಲಕ ಅನಿತಾ ಮತ್ತು ಸಿ.ಚಂದನಾ ಸಾಧನೆ ಮಾಡಿದ್ದಾರೆ. 

ಇಬ್ಬರು ವಿಶಾಲ್‌ ಆಂಗ್ಲ ಶಾಲೆ ವಿದ್ಯಾರ್ಥಿನಿಯರು.

ಅನಿತಾಳ ಪೋಷಕರಾದ ದೀಪಕ್‌ ಬಹದ್ದೂರ್‌ ಮತ್ತು ದುರ್ಗಾ ನೇಪಾಳದವರು. ಇವರು 20 ವರ್ಷಗಳಿಂದ ನೆಲಮಂಗಲದಲ್ಲಿ ನೆಲೆಸಿದ್ದಾರೆ. ದೀಪಕ್‌ ಅವರು ಕಾರ್ಖಾನೆಯಲ್ಲಿ ಸಹಾಯಕರಾಗಿದ್ದಾರೆ. 

‘ಶಾಲೆಯಲ್ಲಿ ಹೇಳಿಕೊಡುತ್ತಿದ್ದ ಪಾಠವನ್ನೇ ಗಮನ ವಹಿಸಿ ಕೇಳುತ್ತಿದ್ದೆ. ಮನೆಯಲ್ಲಿ ನಿತ್ಯವೂ ಅಭ್ಯಾಸ ಮಾಡಿ
ದ್ದರ ಫಲವಾಗಿ ಹೆಚ್ಚು ಅಂಕ ಬಂದಿದೆ. 620 ಅಂಕಗಳಿಗಿಂತ ಹೆಚ್ಚು ಗಳಿಸುವ ನಿರೀಕ್ಷೆ ಇತ್ತು’ ಎನ್ನುತ್ತಾರೆ ಅನಿತಾ. 

ಸಿ.ಚಂದನಾ ಪೋಷಕರು ಶಾಲೆಯ ಶುಲ್ಕ ಪಾವತಿಸಲು ಅಶಕ್ತರಾಗಿದ್ದರು. ತಂದೆ ಚಿಕ್ಕಣ್ಣ ಎಂ.ಎ.ಪದವೀಧರರಾಗಿದ್ದರೂ ನಿರುದ್ಯೋಗಿಯಾಗಿದ್ದಾರೆ. ಚಂದನಾಳ ಪ್ರತಿಭೆಯನ್ನು ಮನಗಂಡು ಶಾಲೆಯ ಅಧ್ಯಕ್ಷ ಟಿ.ಕೆ.ನರಸೇಗೌಡ ಅವರು ಶಾಲಾ ಸಮವಸ್ತ್ರ, ಪುಸ್ತಕಗಳನ್ನು ನೀಡಿ ಉಚಿತವಾಗಿ ಶಿಕ್ಷಣ ನೀಡಿದ್ದಾರೆ. 

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !