ಶುಕ್ರವಾರ, ಸೆಪ್ಟೆಂಬರ್ 20, 2019
27 °C
ಬೇಸಿಗೆ ವಿಶೇಷ

ಪ್ರವಾಸ ಹೋಗಿ, ಮಾವಿನ ರುಚಿ ನೋಡಿ

Published:
Updated:
Prajavani

ನೈಸರ್ಗಿಕವಾಗಿ ತೋಟದಲ್ಲಿ ಬೆಳೆದ ಮಾವಿನಹಣ್ಣುಗಳ ರುಚಿ ನೋಡುವುದು ನಗರಿಗರ ಪಾಲಿಗೆ ಕನಸೇ ಸರಿ. ಅಜ್ಜಿ ಮನೆ, ಅತ್ತೆ ಮನೆ, ಮಾವನ ಮನೆಗೆ ಹೋಗಿ ಹಣ್ಣು ತಿನ್ನುವುದಕ್ಕೂ ಸಮಯ ಇಲ್ಲದ ನಗರವಾಸಿಗಳಿಗಾಗಿಯೇ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಮ್ಯಾಂಗೊ ಪಿಕ್ಕಿಂಗ್ ಟೂರ್‌ ಆಯೋಜಿಸಿದೆ. 

ಕುಟುಂಬ ಸಮೇತರಾಗಿ ಬಸ್‌ನಲ್ಲಿ ಪ್ರವಾಸ ಹೋಗಿ, ತೋಟಗಳಲ್ಲಿ ಹಣ್ಣು ಕಿತ್ತು, ತೂಕ ಹಾಕಿಸಿಕೊಂಡು ಕಡಿಮೆ ಬೆಲೆಯಲ್ಲಿ ಮಾವಿನ ಹಣ್ಣುಗಳ ರುಚಿ ನೋಡುವ ಅವಕಾಶವನ್ನು ನೀಡಿದೆ.  200 ಜನಕ್ಕೆ ಮಾತ್ರ ಅವಕಾಶ ಇದೆ.

ಈ ಬಾರಿ ಮುನಿರಾಜು ಹಾಗೂ ಕೆಂಪಣ್ಣ ಅವರ ದೊಡ್ಡಮಾಲೂರಿನ ತೋಟ (ತುಮಕೂರು ಜಿಲ್ಲೆ), ಕಮಲಮ್ಮ ಹಾಗೂ ಶಿವಣ್ಣ ಅವರ ಕನ್ನಮಂಗಲದ ತೋಟ (ಚನ್ನಪಟ್ಟಣ ತಾಲ್ಲೂಕು) , ಬಿ.ಸಿ.ವಾಸು ಅವರ ಬಿಳಗುಂಬದ ತೋಟ (ರಾಮನಗರ ಜಿಲ್ಲೆ)ಕ್ಕೆ ಹೋಗುವ ಅವಕಾಶ ಇದೆ. 

www.ksmdmcl.orgನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ₹100 ನ್ನು online/RTGS/NEFT ಮೂಲಕ ಅಂತರ್ಜಾಲದಲ್ಲಿ ತಿಳಿಸಿರುವ ಖಾತೆಗೆ ಪಾವತಿಸಬೇಕು. ಬಳಿಕ ಪಾವತಿಯ ವಿವರವನ್ನು mangopickingtourism@gmail.com ಗೆ ಕಡ್ಡಾಯವಾಗಿ ಮೇಲ್‌ ಕಳಿಸಬೇಕಿದೆ. 

ಭಾನುವಾರ (ಮೇ 19) ಬೆಳಿಗ್ಗೆ 8ಕ್ಕೆ ಎಂ.ಎಸ್‌.ಬಿಲ್ಡಿಂಗ್‌ ಪಾರ್ಕಿಂಗ್  ಆವರಣದಿಂದ ಬಸ್‌ಗಳು ಹೊರಡಲಿವೆ. ಮೊದಲು ಬಂದವರಿಗೆ ಮಾತ್ರ ಆದ್ಯತೆ. ಹೆಚ್ಚಿನ ವಿವರಗಳಿಗೆ –08022236837 ಗೆ ಸಂಪರ್ಕಿಸಬಹುದು.

Post Comments (+)