ರೈಲ್ವೆ ಹುದ್ದೆ ಭರವಸೆ ನೀಡಿ ₹ 6.50 ಲಕ್ಷ ವಂಚನೆ
ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಸೂಪರ್ವೈಸರ್ ಕೆಲಸ ಕೊಡಿಸುವ ಭರವಸೆ ನೀಡಿ ಉದ್ಯೋಗ ಆಕಾಂಕ್ಷಿಯೊ
ಬ್ಬರಿಗೆ ₹ 6.50 ಲಕ್ಷ ವಂಚಿಸಿದ ಪ್ರಕರಣ ವಿವೇಕನಗರ ಠಾಣೆಯಲ್ಲಿ ದಾಖಲಾಗಿದೆ.
ಸಂಜಯನಗರ ನಿವಾಸಿ ಜಿ.ಆರ್. ನವೀನ್ ಎಂಬುವವರ ವಿರುದ್ಧ ವಂಚನೆಗೆ ಒಳಗಾದ ಆಸ್ಟಿನ್ ಟೌನ್ ನಿವಾಸಿ ಸಂಪತ್ ದೂರು ನೀಡಿದ್ದಾರೆ.
‘ಫೆಬ್ರುವರಿ ತಿಂಗಳಲ್ಲಿ ರೈಲ್ವೆ ಇಲಾಖೆಯ ವಿವಿಧ ಹುದ್ದೆ ನೇಮಕಾತಿಗೆ ಆಯ್ಕೆ ಪರೀಕ್ಷೆ ನಡೆದಿತ್ತು. ಪರೀಕ್ಷೆಗೆ ಹಾಜರಾಗಲು ನಾನು ಯಶವಂತಪುರಕ್ಕೆ ಹೋಗಿದ್ದಾಗ, ರೈಲ್ವೆಯಲ್ಲಿ ಸೂಪರ್ವೈಸರ್ ಕೆಲಸ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ ನವೀನ್, ಉದ್ಯೋಗ ದೊರಕಿಸಿಕೊಡುವ ಭರವಸೆ ನೀಡಿದ್ದರು. ಬಳಿಕ ನನ್ನ ಮಾವನವರ ಜೊತೆಗೂ ಮಾತನಾಡಿದ್ದ ನವೀನ್ 15 ದಿನಗಳ ಬಳಿಕ ನನ್ನ ಮನೆಗೆ ಬಂದು ₹ 6.50 ಲಕ್ಷ ತೆಗೆದುಕೊಂಡು ಹೋಗಿದ್ದಾನೆ. ನಂತರ ಉದ್ಯೋಗದ ಬಗ್ಗೆ ವಿಚಾರಿಸಿದಾಗ, ಇಂದು ಮಾಡಿಕೊಡುತ್ತೇನೆ, ನಾಳೆ ಮಾಡಿಕೊಡುತ್ತೇನೆ ಎಂದು ಸಬೂಬು ಹೇಳುತ್ತಿದ್ದಾನೆ. ಕೆಲವು ದಿನಗಳಿಂದ ನವೀನ್ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.