18 ಗಂಟೆ ನೀರು ಪೂರೈಕೆ ಇಲ್ಲ

7

18 ಗಂಟೆ ನೀರು ಪೂರೈಕೆ ಇಲ್ಲ

Published:
Updated:

ಬೆಂಗಳೂರು: ನಗರದ ಬಹುತೇಕ ಪ್ರದೇಶಗಳಲ್ಲಿ ಜನವರಿ 22ರ ರಾತ್ರಿ 10 ಗಂಟೆಯಿಂದ ಜ.23ರ ಸಂಜೆ 4 ಗಂಟೆಯವರೆಗೆ ಜಲಮಂಡಳಿಯ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ.

ಕಾವೇರಿ ನೀರು ಸರಬರಾಜು ಯೋಜನೆ 1, 2ನೇ ಹಂತದ ಪಂಪಿಂಗ್‌ ಕೇಂದ್ರಗಳಲ್ಲಿನ ವಿದ್ಯುತ್‌ ಯಂತ್ರಗಳ ಜೋಡಣೆ (ಸರ್ಜ್‌ ಪ್ರೊಟೆಕ್ಷನ್‌) ಕಾಮಗಾರಿ ಹಾಗೂ ಟಿ.ಕೆ.ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯ 3ನೇ ಹಂತದಲ್ಲಿನ ಏರ್‌ ವೆಸೆಲ್‌ಗೆ ಬ್ಲಾಡರ್‌ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಎಲ್ಲೆಲ್ಲಿ ವ್ಯತ್ಯಯ: ಯಶವಂತಪುರ, ಮಲ್ಲೇಶ್ವರ, ಮತ್ತೀಕೆರೆ, ಜಯಮಹಲ್‌, ವಸಂತನಗರ, ಮುತ್ಯಾಲನಗರ, ಆರ್‌.ಟಿ.ನಗರ, ಸದಾಶಿವನಗರ, ಹೆಬ್ಬಾಳ, ಭಾರತಿನಗರ, ಪ್ಯಾಲೇಸ್‌ ಗುಟ್ಟಳ್ಳಿ, ಫ್ರೇಜರ್‌ಟೌನ್‌, ವಿಲ್ಸನ್‌ ಗಾರ್ಡನ್‌, ಹೊಂಬೇಗೌಡನಗರ, ಪಿಳ್ಳಣ್ಣ ಗಾರ್ಡನ್‌, ಬನ್ನಪ್ಪ ಪಾರ್ಕ್‌, ಶಿವಾಜಿನಗರ, ಜೀವನ್‌ ಬಿಮಾ ನಗರ, ಚಿಕ್ಕಲಾಲ್‌ಬಾಗ್‌, ಗವಿಪುರ. ಬ್ಯಾಟರಾಯನಪುರ, ಕಸ್ತೂರಬಾ ರಸ್ತೆ, ಮಡಿವಾಳ, ಯಲಚೇನಹಳ್ಳಿ, ನೀಲಸಂದ್ರ, ಕೆ.ಆರ್‌.ಮಾರುಕಟ್ಟೆ, ಸಂಪಂಗಿರಾಮ ನಗರ, ಕುಮಾರಸ್ವಾಮಿ ಬಡಾವಣೆ, ಬನಶಂಕರಿ, ಬನಶಂಕರಿ 2ನೇ ಮತ್ತು 3ನೇ ಹಂತ, ಜಯನಗರ, ಜೆ.ಪಿ.ನಗರ, ಬಸವನಗುಡಿ, ಓಕಳಿಪುರ, ಚಾಮರಾಜಪೇಟೆ, ಪದ್ಮನಾಭನಗರ, ಹೊಸಕೆರೆಹಳ್ಳಿ, ಭೈರಸಂದ್ರ. ಲಿಂಗರಾಜಪುರ, ಆಡಗೋಡಿ, ದೊಮ್ಮಲೂರು, ಬಿಟಿಎಂ ಬಡಾವಣೆ, ಬಾಪೂಜಿ ನಗರ, ಶ್ರೀರಾಮಪುರ, ಇಂದಿರಾನಗರ, ಹಲಸೂರು, ಶಾಂತಿನಗರ, ಕೋರಮಂಗಲ, ವಿಜಯನಗರ, ಅಶೋಕ ನಗರ, ಈಜೀಪುರ, ವಿ.ವಿ.ಪುರ, ಮಾವಳ್ಳಿ, ಗಾಂಧಿನಗರ, ಕತ್ರಿಗುಪ್ಪೆ, ಚಿಕ್ಕಪೇಟೆ, ಎಂ.ಜಿ.ರಸ್ತೆ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆ ವ್ಯತ್ಯಯ ಆಗಲಿದೆ ಎಂದು ಜಲಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !