ವಾಲಿದ ಕಟ್ಟಡ: ಮಾಲೀಕನ ಬಂಧನ

7

ವಾಲಿದ ಕಟ್ಟಡ: ಮಾಲೀಕನ ಬಂಧನ

Published:
Updated:
Deccan Herald

ಬೆಂಗಳೂರು: ಮಾರತ್ತಹಳ್ಳಿ ಸಮೀಪದ ಅಶ್ವಥ್‌ ನಗರದಲ್ಲಿ ಏಕಾಏಕಿ ವಾಲಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಪೇಯಿಂಗ್‌ ಗೆಸ್ಟ್‌ ಕಟ್ಟಡ ಅಕ್ರಮವಾಗಿ ನಿರ್ಮಾಣಗೊಂಡಿದೆ ಎಂಬ ಮಾಹಿತಿ ಹೊರಬಿದ್ದಿದೆ. ಕಟ್ಟಡದ ಮಾಲೀಕ ಶಿವಪ್ರಸಾದ್‌ನನ್ನು ಬಂಧಿಸಲಾಗಿದೆ. 

20X30 ಸೈಟ್‌ನಲ್ಲಿ ನೆಲಮಹಡಿ ಮತ್ತು ಎರಡು ಅಂತಸ್ತಿನ ನಿರ್ಮಾಣಕ್ಕೆ ಪರವಾನಗಿ ನೀಡಲಾಗಿತ್ತು. ಆದರೆ ಮಾಲೀಕ ಹೆಚ್ಚುವರಿಯಾಗಿ ಮತ್ತೊಂದು ಮಹಡಿ ಕಟ್ಟಿದ್ದ. ಆ ಹೆಚ್ಚುವರಿ ಅಂತಸ್ತನ್ನು ಕೆಡವಲು ಪಾಲಿಕೆ ಮೂರು ತಿಂಗಳ ಹಿಂದೆ ನೋಟಿಸ್‌ ನೀಡಿದ್ದರೂ ಆತ ನಿರ್ಲಕ್ಷಿಸಿದ್ದ. ಕಟ್ಟಡದಲ್ಲಿ 18 ಕೊಠಡಿಗಳ ಪೇಯಿಂಗ್‌ ಗೆಸ್ಟ್‌ (ಪಿ.ಜಿ.) ನಡೆಸಲು ಶ್ರೀನಿವಾಸ ರೆಡ್ಡಿ ಎಂಬುವವರಿಗೆ ನೀಡಿದ್ದ. ರೆಡ್ಡಿ ಸಹ ಕುಟುಂಬ ಸಮೇತರಾಗಿ ನೆಲಮಹಡಿಯಲ್ಲಿ ನೆಲೆಸಿದ್ದರು.

ವರ್ಷದ ಹಿಂದೆ ನಿರ್ಮಿಸಿದ್ದ ಕಟ್ಟಡ ಇದು. ಪಿಲ್ಲರ್‌ಗಳಲ್ಲಿ ಗುರುವಾರ ರಾತ್ರಿ ಬಿರುಕು ಕಾಣಿಸಿಕೊಂಡಿತ್ತು. ಕರೆ ಮೇರೆಗೆ ಬಂದ ಅಗ್ನಿಶಾಮಕ ದಳ ಮತ್ತು ಪೋಲಿಸರು ಕಟ್ಟಡದ ವಾಸಿಗಳನ್ನು ಸ್ಥಳಾಂತರಿಸಿದರು. 

ಪಾಲಿಕೆಯಿಂದ ಆದೇಶ ಬಂದ ಬಳಿಕ ಕಟ್ಟಡವನ್ನು ಯಂತ್ರೋಪಕರಣದ ಮೂಲಕ ತೆರವು ಮಾಡುವ ಕೆಲಸವನ್ನು ಸಿಬ್ಬಂದಿ ಶುಕ್ರವಾರ ಆರಂಭಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !