ವೈದ್ಯರ ಮನೆಗೆ ಬಂದುಹೋದ ವನ್ಯಪ್ರಾಣಿ

7

ವೈದ್ಯರ ಮನೆಗೆ ಬಂದುಹೋದ ವನ್ಯಪ್ರಾಣಿ

Published:
Updated:

ಧಾರವಾಡ: ನಗರದ ವೈದ್ಯರೊಬ್ಬರ ಮನೆಗೆ ಸೋಮವಾರ ತಡರಾತ್ರಿ ಕರಡಿ ಆಕಾರದ ಪ್ರಾಣಿಯೊಂದು ಬಂದು ಹೋಗಿದ್ದು ಅವರ ಮನೆಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಮಿಚಿಗನ್ ಬಡಾವಣೆಯ ವೆಂಕಟೇಶ ನಗರದಲ್ಲಿರುವ ಡಾ. ಮಠಪತಿ ಅವರ ಮನೆಯ ಅಕ್ಕಪಕ್ಕ ಓಡಾಡಿದ ಈ ಪ್ರಾಣಿ, ನಂತರ ಗೇಟಿನ ಮಧ್ಯಭಾಗದಲ್ಲಿರುವ ಜಾಗದಲ್ಲಿ ನುಸುಳಿಕೊಂಡು ಮನೆಯೊಳಗೆ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.  ಸಿಸಿಟಿವಿಯಲ್ಲಿ ದಾಖಲಾದ ಪ್ರಾಣಿ ಹನಿ ಬ್ಯಾಡ್ಜ್ ಅಥವಾ ಪುನುಗಿನ ಬೆಕ್ಕಿನ ಆಕಾರದಲ್ಲಿದೆ. ಆದರೆ ಕೆಲವೊಮ್ಮೆ ಕರಡಿಯಂತೆಯೂ ಕಾಣುತ್ತಿದೆ. 

‘ನಗರ ಪ್ರದೇಶದಲ್ಲಿ ವನ್ಯಪ್ರಾಣಿಯೊಂದು ಬಂದು ಹೋಗಿರುವುದು ಪ್ರಾಣಿಗೆ ಹಾಗೂ ಮನುಷ್ಯರಿಗೆ ಇಬ್ಬರಿಗೂ ತೊಂದರೆಯಾಗುವ ಸಾಧ್ಯತೆ ಹೆಚ್ಚು. ಇಂಥ ಸಂದರ್ಭದಲ್ಲಿ ಮಾಹಿತಿಯನ್ನು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಇಲ್ಲವೇ ಉಚಿತ ದೂರವಾಣಿ ಸಂಖ್ಯೆ 1926ಗೆ ಕರೆ ಮಾಡಿಯಾದರೂ ಸಾರ್ವಜನಿಕರು ತಿಳಿಸಬೇಕು’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ವಿ.ಮಂಜುನಾಥ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !