ಸಿಂಧಿ ಕಾಲೇಜು: 350 ವಿದ್ಯಾರ್ಥಿಗಳಿಗೆ ಪದವಿ

ಭಾನುವಾರ, ಮೇ 26, 2019
31 °C

ಸಿಂಧಿ ಕಾಲೇಜು: 350 ವಿದ್ಯಾರ್ಥಿಗಳಿಗೆ ಪದವಿ

Published:
Updated:
Prajavani

ಯಲಹಂಕ: ಕೆಂಪಾಪುರದಲ್ಲಿನ ಸಿಂಧಿ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ವಿಭಾಗಗಳಲ್ಲಿ ಪದವಿ ಪೂರ್ಣಗೊಳಿಸಿದ 350 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಬೆಂಗಳೂರು ಘಟಕದ ಅಧ್ಯಕ್ಷ ಸಿ.ಎ.ಶ್ರವಣ್‌ ಗುಡ್ತೂರ್‌ ಈ ವೇಳೆ ಮಾತನಾಡಿ, ‘ಭಾವಿಸಿರುವುದಕ್ಕಿಂತ ಹೆಚ್ಚಿನ ಸಾಮರ್ಥ್ಯ ನಿಮ್ಮಲ್ಲಿರುತ್ತದೆ. ಪರಿಸ್ಥಿತಿ ಎದುರಾದಾಗ ಮಾತ್ರ ಅಂತಹ ಸಾಮರ್ಥ್ಯದ ಬಗ್ಗೆ ನಿಮಗೆ ಅರಿವಾಗುತ್ತದೆ. ದೊಡ್ಡಸಾಧನೆ ಮಾಡುವಾಗ ಅರ್ಧದಲ್ಲೆ ನಿಂತು ತೃಪ್ತಿಪಡದೆ, ಗುರಿ ಮುಟ್ಟುವವರೆಗೆ ಪ್ರಯತ್ನ ಮುಂದುವರಿಸಬೇಕು’ ಎಂದರು.

‘ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಸಕಾರಾತ್ಮಕ ಮನೋಭಾವ, ಆತ್ಮವಿಶ್ವಾಸ, ಸಮಯಪ್ರಜ್ಞೆ ಹಾಗೂ ಸಮಸ್ಯೆಸವಾಲಾಗಿ ಸ್ವೀಕರಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇದರಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದರು.

ವಿಶ್ವವಿದ್ಯಾಲಯಮಟ್ಟದ ಹಾಗೂ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಸಿಂಧಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್.ಆರ್.ನಾರಂಗ್, ಗೌರವ ಕಾರ್ಯದಶರ್ಿ ಅವಿನಾಶ್ ಕುಕ್ರೇಜ, ಪ್ರಾಂಶುಪಾಲ ಡಾ.ಬಿ.ಎಸ್.ಶ್ರೀಕಂಠ, ಉಪಪ್ರಾಂಶುಪಾಲರಾದ ಪ್ರೊ.ಎನ್.ಆಶಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !