ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಲಟ್ ನಿಷ್ಪ್ರಯೋಜಕ ಎಂಬುದು ಗೊತ್ತಿತ್ತು: ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌

Last Updated 20 ಜುಲೈ 2020, 11:08 IST
ಅಕ್ಷರ ಗಾತ್ರ

ಜೈಪುರ: ಸಚಿನ್‌ ಪೈಲಟ್‌ ಒಬ್ಬ ನಿಷ್ಪ್ರಯೋಜಕ ವ್ಯಕ್ತಿ, ಏನೂ ಕೆಲಸ ಮಾಡುವುದಿಲ್ಲ ಎಂಬುದು ಮೊದಲೇ ಗೊತ್ತಿತ್ತು ಎಂದು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ. ಅಲ್ಲದೆ, ಪಕ್ಷದ ಹಿತದೃಷ್ಟಿಯಿಂದ ನಾನು ಅವರ ವಿರುದ್ಧ ಏನೂ ಮಾತನಾಡದೇ ಸುಮ್ಮನಿದ್ದೆ ಎಂದೂ ಹೇಳಿಕೊಂಡಿದ್ದಾರೆ.

ಜೈಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ವೇಳೆ ಗೆಹ್ಲೋಟ್‌ ಅವರು ಸಚಿನ್‌ ಪೈಲಟ್‌ ವಿರುದ್ಧ ಕಿಡಿಕಾರಿದರಾದರೂ, ಅವರ ಹೆಸರನ್ನು ಮಾತ್ರ ಉಲ್ಲೇಖಿಸಲಿಲ್ಲ.

‘ಅವರು ಯಾವಾಗಲೂ ಸರ್ಕಾರ ಬೀಳಿಸುವುದರ ಕುರಿತ ಕುತಂತ್ರಗಳ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದರು. ಆದರೆ, ಅವರು ಹೀಗೆ ಮಾಡುತ್ತಾರೆ ಎಂದರೆ ಯಾರೂ ನಂಬುತ್ತಿರಲಿಲ್ಲ. ಅಮಾಯಕನ ರೀತಿಯ ಮುಖ, ಇಂಗ್ಲಿಷ್‌, ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುವ ಶಕ್ತಿ ಮತ್ತು ದೇಶದಾದ್ಯಂತ ಮಾಧ್ಯಮಗಳೊಂದಿಗೆ ಉತ್ತಮ ಒಡನಾಟ ಹೊಂದಿರುವ ಅವರು ಹೀಗೆ ಮಾಡಬಲ್ಲರೇ ಎಂದು ಯಾರೂ ಅಂದುಕೊಳ್ಳುತ್ತಿರಲಿಲ್ಲ,’ ಎಂದು ಮಾರ್ಮಿಕವಾಗಿ ಗೆಹ್ಲೋಟ್‌ ಹೇಳಿದ್ದಾರೆ.

‘ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರನ್ನು ಬದಲಾವಣೆ ಮಾಡುವಂತೆ ಕೇಳದೇ ಇದ್ದ ಏಕೈಕ ರಾಜ್ಯ ರಾಜಸ್ಥಾನವೊಂದೇ. ಸಚಿನ್‌ ಪೈಲಟ್‌ 7 ವರ್ಷಗಳಿಂದ ರಾಜಸ್ಥಾನ ಪಿಸಿಸಿ ಅಧ್ಯಕ್ಷರಾಗಿದ್ದರು. ಇಲ್ಲಿ ಏನೂ ಆಗುತ್ತಿಲ್ಲ ಎಂಬುದು ನಮಗೆ ಗೊತ್ತಿತ್ತು. ಅವರು ನಿಷ್ಪ್ರಯೋಜಕ ಮತ್ತು ಜಡವಾಗಿದ್ದಾರೆ ಎಂಬುದೂ ತಿಳಿದಿತ್ತು. ಆದರೆ, ಪಕ್ಷದ ಹಿತದೃಷ್ಟಿಯಿಂದ ನಾವು ಏನನ್ನೂ ಮಾತನಾಡಿರಲಿಲ್ಲ,’ ಎಂದು ಗೆಹ್ಲೋಟ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT