ಗುರುವಾರ , ಅಕ್ಟೋಬರ್ 1, 2020
27 °C

ಪಶ್ಚಿಮ ಬಂಗಾಳ: ಹಯಸಿಂತ್ ಹೂವಿನಿಂದ ಪರಿಸರ ಸ್ನೇಹಿ ರಾಖಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೃಷ್ಣಗಂಜ್ ‌(ಪಶ್ಚಿಮ ಬಂಗಾಳ): ನಾಡಿಯಾ ಜಿಲ್ಲೆಯ ಸರ್ಕಾರೇತರ ಸಂಸ್ಥೆಯೊಂದರ ಮಹಿಳೆಯರು ನೀರಿನಲ್ಲಿ ಬೆಳೆಯುವ ಹಯಸಿಂತ್ ಹೂವಿನಿಂದ ಪರಿಸರ ಸ್ನೇಹಿ ರಾಖಿ ತಯಾರಿಸಿದ್ದಾರೆ.

ಇಂತಹ ರಾಖಿ ಇದೇ ಮೊದಲ ಬಾರಿ ತಯಾರಿಸಲಾಗಿದೆ. ರಾಖಿಗೆ ಬಳಸಲಾದ ಬಣ್ಣಗಳಲ್ಲಿಯೂ ಯಾವುದೇ ರಾಸಾಯನಿಕಗಳಿಲ್ಲ ಎಂದು 'ಇಕೊ ಕ್ರಾಫ್ಟ್‌’ ಸಂಸ್ಥೆಯ ಪರಿಸರ ಸ್ನೇಹಿ ಕರಕುಶಲ ವಿಭಾಗದ ಕಾರ್ಯದರ್ಶಿ ಸ್ವಪನ್‌ ಬೌಮಿಕ್‌ ತಿಳಿಸಿದ್ದಾರೆ.

ಮಜ್ದಿಯಾ ಪ್ರಾಂತ್ಯದಲ್ಲಿನ ಸ್ವಯಂ ಸೇವಾ ಸಂಘಟನೆಯ ಸದಸ್ಯರು ಈ ಮಾದರಿಯ 400ಕ್ಕೂ ಹೆಚ್ಚು ರಾಖಿಗಳನ್ನು ತಯಾರಿಸಿದ್ದಾರೆ. ಕುಶಲಕರ್ಮಿ ದೇವಶಿಶ್ ಬಿಸ್ವಾಸ್‌ ಅವರು ಹಯಸಿಂತ್ ಹೂವಿನಿಂದ ರಾಖಿ ತಯಾರಿಸುವುದನ್ನು ಮಹಿಳೆಯರಿಗೆ ಕಲಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

2.5 ಅಡಿಯುಳ್ಳ ಹಯಸಿಂತ್ ಗಿಡಗಳನ್ನು ಮಾತ್ರ ರಾಖಿಗೆ ಬಳಸಲಾಗಿದೆ. ಗಿಡವನ್ನು ಶುಚಿಗೊಳಿಸಿ ಬಳಿಕ ಅದರ ಎಲೆ, ಕಾಂಡಗಳನ್ನು ಬೇರ್ಪಡಿಸಿ ಒಣಗಿಸಲಾಗುತ್ತದೆ. ಬಳಿಕ ಕಾಂಡಗಳ ನಾರನ್ನು ಬಳಸಿ ರಾಖಿಯನ್ನು ಸಿದ್ಧಗೊಳಿಸಲಾಗುತ್ತದೆ ಎಂದು ಬೌಮಿಕ್‌ ವಿವರಿಸಿದ್ದಾರೆ.

ಹೂಗ್ಲಿ ಜಿಲ್ಲೆಯ ಬಂಡೆಲ್‌ನಲ್ಲಿ 150 ರಾಖಿಗಳು ಮತ್ತು ನಾಡಿಯಾ ಜಿಲ್ಲೆಯಲ್ಲಿ 150  ರಾಖಿಗಳನ್ನು ಮಾರಾಟ ಮಾಡಲಾಗಿದೆ. ರಾಖಿಯ ಗಾತ್ರದ ಆಧಾರದಲ್ಲಿ ₹5, ₹10 ಮತ್ತು 15 ರೂಪಾಯಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಭೌಮಿಕ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು